ಬೆಂಗಳೂರು: ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬೈಂದೂರು ಬಿಜೆಪಿ ಟಿಕೆಟ್ ಕೊಡಿಸೋದಾಗಿ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಈಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಸಿಸಿಬಿ ಪರಿಶೀಲನೆಯ ವೇಳೆಯಲ್ಲಿ ಅಭಿನವ ಹಾಲಶ್ರೀ ಅವರಿದ್ದ ಹಿರೇಹಡಗಲಿ ಹಾಲಶ್ರೀ ಮಠದಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.
ಈಗ ಚೈತ್ರ ಕುಂದಾಪುರ ಹಾಗೂ ಗ್ಯಾಂಗ್ ನಿಂದ ನಡೆಸಿದಂತ ಎಂಎಲ್ಎ ಟಿಕೆಟ್ ಡೀಲ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತನಿಖೆ ಚುರುಕುಗೊಳಿಸಿದಂತ ಸಿಸಿಬಿ ಪೊಲೀಸರಿಗೆ ಹಿರೇಹಡಗಲಿಯ ಹಾಲಶ್ರೀ ಮಠದಲ್ಲಿ ಅಭಿನವ ಶ್ರೀ ವಾಸವಿದ್ದಂತ ಸ್ಥಳದಲ್ಲಿ 65 ಲಕ್ಷ ರೂಪಾಯಿ ಬ್ಯಾಗ್ ಪತ್ತೆಯಾಗಿದೆ.
ಚೈತ್ರಾ ಕುಂದಾಪುರ ಹಾಗೂ ಟೀಂ ವಿರುದ್ಧ ದೂರು ದಾಖಲಾಗುತ್ತಿದ್ದಂತೇ, ಅಭಿನವ ಹಾಲಶ್ರೀ ನಾಪತ್ತೆಯಾಗಿದ್ದರು.
ಹಣ ಸಹಿತ ಮೈಸೂರಿಗೆ ಹೋಗಿದ್ದಂತ ಅವರು, ವಕೀಲ ಪ್ರಣವ್ ಅವರ ಮನೆಯಲ್ಲಿ ಇಡೋದಕ್ಕೆ ಪ್ರಯತ್ನಿಸಿದ್ದರು. ಆದ್ರೇ ವಕೀಲರಿಗೂ ಗೊತ್ತಾಗದ ಹಾಗೆ ಕಾರು ಚಾಲಕನ ಮೂಲಕ ಕಚೇರಿಗೆ ಹಣದ ಬ್ಯಾಗ್ ತಲುಪಿಸಿದ್ದರು.
ಆದರೇ ಈ ಹಣದ ಬಗ್ಗೆ ವಕೀಲ ಪ್ರಣವ್ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿ, ಹಾಲಶ್ರೀ 65 ಲಕ್ಷ ಹಣ ತಂದಿದ್ದರು. ನಮ್ಮ ಬಳಿಗೆ ಕೊಡೋದಕ್ಕೆ ಪ್ರಯತ್ನಿಸಿದ್ರು. ನಾವು ತಗೊಳ್ಳಲಿಲ್ಲ ಎಂಬುದಾಗಿ ಹೇಳಿಕೆ ಬಿಡುಗಡೆ ಮಾಡಿದ್ದರು.
ನಿನ್ನೆಯಷ್ಟೇ ಒಡಿಶಾದ ಕಟಕ್ ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿಗೆ ಕರೆತಂದು, ನ್ಯಾಯಾಲಯಕ್ಕೆ ಹಾಜರುಪಡಿಸಿ, ತಮ್ಮ ವಶಕ್ಕೆ ಪಡೆದಿದ್ದರು.
ಈ ಬಳಿಕ ತನಿಖೆ ಚುರುಕುಗೊಳಿಸಿದ್ದಂತ ಸಿಸಿಬಿ ಪೊಲೀಸರು ಹಿರೇಹಡಗಲಿಯಲ್ಲಿನ ಹಾಲಶ್ರೀ ಮಠಕ್ಕೆ ತೆರಳಿ ಕೇಸ್ ಸಂಬಂಧ ಶೋಧ ಕಾರ್ಯ ನಡೆಸಿದ್ದರು. ಈ ವೇಳೆಯಲ್ಲಿ ವಕೀಲ ಪ್ರಣವ್ ಹೇಳಿಕೆ ಹೊರ ಬೀಳುತ್ತಿದ್ದಂತೆ ಮಠಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, 65 ಲಕ್ಷ ಹಣ ಪತ್ತೆಯಾಗಿದೆ. ಈ ಕಂತೆ ಕಂತೆ ಹಣ ಕಂಡು ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.