ಬೆಂಗಳೂರು: –ಪೀಣ್ಯ ದಾಸರಹಳ್ಳಿ ಚಿತ್ರ ನಟಿ ಒಬ್ಬರಲ್ಲಿ ಚಾಲಕರ ಕಣ್ಮಣಿ ಎಂದೆ ಕರೆಯಲ್ಪಡುವ ದಿವಂಗತ ಶಂಕರ್ ನಾಗ್’ ಎಂದರೆ ತಪ್ಪಾಗಲಾರದು ಎಂದು ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಹೇಳಿದರು.
ಅವರು ರಾಜಗೋಪಾಲನಗರ ವಾರ್ಡಿನ ಜಿಕೆಡಬ್ಲೂ ಲೇಔಟ್ ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನ ಹತ್ತಿರ ಆಟದ ಮೈದಾನದಲ್ಲಿ ಅರ್ಪಿತಾ ಸೇವಾ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ವತಿಯಿಂದ ‘ಚಾಲಕರ ಕಣ್ಮಣಿ ಶಂಕರ್ ನಾಗ್’ ಅವರ ಜನ್ಮದಿನದ ಪ್ರಯುಕ್ತ ಚಾಲಕರ ದಿನಾಚರಣೆಯ ಅಂಗವಾಗಿ ಸಪ್ತಗಿರಿ ಆಸ್ಪತ್ರೆ ಸಹಕಾರದೊಂದಿಗೆ ಆಯೋಜಿಸಿದ್ದ ‘ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರ ಚಾಲಕ ಮಿತ್ರರಿಗೆ ಉಡುಗೊರೆ ನೀಡಿ ಗೌರವಿಸುವ ಮೂಲಕ ಉದ್ಘಾಟಿಸಿ ಕಾಂಗ್ರೆಸ್ ಪ್ರಭಾವಿ ನಾಯಕ ಲಗ್ಗೆರೆ ನಾರಾಯಣ ಸ್ವಾಮಿ ಮಾತನಾಡಿದರು.
ಮಹಾನ್ ಚೇತನ ‘ಶಂಕರ್ ನಾಗ್’ ಹುಟ್ಟುಹಬ್ಬದ ನಿಮಿತ್ತ ಮಾಲಾರ್ಪಣೆ ಮಾಡಿದ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಅಧ್ಯಕ್ಷ ಸೋಮಶೇಖರ್ ಗೌಡ ಸರ್ಕಾರದಿಂದ ಇರುವ ಚಾಲಕರ ಯೋಜನೆಗಳ ಸೌಲಭ್ಯಗಳ ಬಗ್ಗೆ ಎಳೆ ಎಳೆಯಾಗಿ ತಿಳಿ ಹೇಳುವುದರ ಜೊತೆಗೆ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ,ಮಾಜಿ ನಗರ ಸಭಾ ಅಧ್ಯಕ್ಷ ಅಂದಾನಪ್ಪ, ಐಪಿ ನಗರ ಲೋಕೇಶ್, ಭೀಮಣ್ಣ,ಅಭಿ, ಕಲಾವಿದರ ಸಂಘದ ಪ್ರಮುಖರಾದ ಆಡುಗೋಡಿ ಶ್ರೀನಿವಾಸ್, ನವನೀತ, ಲಗ್ಗೆರೆ ನಾರಾಯಣ ಸ್ವಾಮಿ ಅವರ ಅಭಿಮಾನಿಗಳು ಕರ್ನಾಟಕ ರಾಜ್ಯ ಚಾಲಕರ ಪರಿಷತ್ ಪದಾಧಿಕಾರಿಗಳು ಸಮಸ್ತ ನಾಗರಿಕ ಬಂಧು ಭಗನಿಯರು ಭಾಗವಹಿಸಿದ್ದರು.
ವರದಿ: – ಅಯ್ಯಣ್ಣ ಮಾಸ್ಟರ್