ತುರುವೇಕೆರೆ: –ತಾಲ್ಲೂಕಿನ ಮುನಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಆರ್. ಗಂಗಾಧರ್, ಉಪಾಧ್ಯಕ್ಷರಾಗಿ ಚಂದ್ರಯ್ಯ (ವಿವೇಕಾನಂದ ನಗರ) ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ನಿಂಗರಾಜು, ಉಪಾಧ್ಯಕ್ಷ ಈರಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಡೆಯಿತು. ನಾಮಪತ್ರ ಸಲ್ಲಿಕೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್. ಗಂಗಾಧರ್, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪ್ರಕ್ರಿಯೆ ಅಂತಿಮಗೊಂಡಾಗ ಮುನಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಆರ್. ಗಂಗಾಧರ್, ಉಪಾಧ್ಯಕ್ಷರಾಗಿ ಚಂದ್ರಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ಸಿಡಿಒ ಶ್ರೀನಿವಾಸ್ ಘೋಷಿಸಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ಚಂದ್ರಯ್ಯ ಅವರನ್ನು ಉದ್ಯಮಿ ಎಂ.ಡಿ. ಮೂರ್ತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಜಿಲ್ಲಾ ಯೂನಿಯನ್ ನಿರ್ದೇಶಕ ವಿಜಯಕುಮಾರ್, ಮುಖಂಡರಾದ ಬಿ.ಎಸ್. ದೇವರಾಜ್, ವಿಜಯೇಂದ್ರ ಕುಮಾರ್, ವಿಶ್ವನಾಥ್, ಟಿ.ಎಸ್. ಬೋರೇಗೌಡ, ಸಂಘದ ನಿರ್ದೇಶಕರಾದ ಎಂ.ಆರ್. ಲಿಂಗರಾಜ್, ಟಿ.ಸಿ. ರಾಜು, ಎಂ.ಜಿ. ಮನು, ವೆಂಕಟೇಶ್, ಈರಯ್ಯ, ಸಾವಿತ್ರಮ್ಮ, ಸಂಘದ ಕಾರ್ಯದರ್ಶಿ ಹರ್ಷ, ಗ್ರಾಮಸ್ಥರಾದ ತಿಮ್ಮಪ್ಪ, ಗೋವಿಂದಪ್ಪ, ಕುಮಾರ್, ಕರಿಯಪ್ಪ, ಬಸವಯ್ಯ, ಮಲ್ಲಣ್ಣ, ರಂಗೇಗೌಡರು, ತಾವರೆಕೆರೆ ಚಿಕ್ಕೇಗೌಡ, ಸುರೇಶ್, ರಮೇಶ್, ಲಕ್ಕಪ್ಪ ಮುಂತಾದವರು ಅಭಿನಂದಿಸಿದರು.
ವರದಿ: ಗಿರೀಶ್