Join The Telegram | Join The WhatsApp |
ಕಲಘಟಗಿ: ತಾಲ್ಲೂಕಿನ ಜಿನ್ನೂರ ಗ್ರಾಮದಲ್ಲಿ ಭಣದ ಹುಣ್ಣಿಮೆಯಂದು ಭಕ್ತರ ಹರ್ಷೋದ್ಗಾರದೊಂದಿಗೆ ಸೋಮವಾರ ಚನ್ನಬಸವೇಶ್ವರ ರಥೋತ್ಸವ ಸಂಭ್ರಮದಿಂದ ಜರಗಿತು.
ಬೆಳಿಗ್ಗೆ ಚನ್ನಬಸವೇಶ್ವರ ದೇವರಿಗೆ ಸಿದ್ದರಾಮ ಸ್ವಾಮಿಗಳಿಂದ ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ವಿಶೇಷ ಪೂಜೆ ಜರುಗಿತು.
ನಂತರ ಭಕ್ತರು ದೇವರಿಗೆ ಹುಮಾಲೆ, ಬಾಳೆಹಣ್ಣು, ತೆಂಗಿನ ಕಾಯಿ ತಂದು ನೈವೇದ್ಯ ಅರ್ಪಿಸಿದರು.
ಮದ್ಯಾಹ್ನ ಬಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಸಾಯಂಕಾಲ 5.30 ಕ್ಕೆ ಡೊಳ್ಳು, ಜಾಂಜು ಮಜಲು,ಭಜನೆ ವಿವಿಧ ವಾದ್ಯ ಮೇಳದೊಂದಿಗೆ ಹರ ಹರ ಮಹದೇವ, ಉಳವಿ ಚನ್ನಬಸವೇಶ್ವರ ಮಹಾರಾಜಿಕೀ ಜೈ ಎಂಬ ಘೋಷಗಳೊಂದಿಗೆ ರಥೋತ್ಸವ ಸಾಗುತ್ತಿದಂತೆ ಸೇರಿದ ಭಕ್ತರು ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಮೆರೆದರು.
Join The Telegram | Join The WhatsApp |