Join The Telegram | Join The WhatsApp |
ಮೈಸೂರು: ಜಿಲ್ಲೆ ಎಚ್ ಡಿ ಕೋಟೆ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಲು ಕಮಲ ಪಾಳೆಯ ಮುಂದಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಮುಂಬರುವ ಚುನಾವಣೆಯಲ್ಲಿ ವನಸಿರಿ ನಾಡಲ್ಲಿ ಬಿಜೆಪಿ ಬಾವುಟ ರೀತಿಯಲ್ಲಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ. ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ತಾಲೂಕು ಬಿಜೆಪಿ ಘಟಕ ಮುಂದಾಗಿದೆ. ಇದರ ಮೊದಲನೆಯ ಹಂತವಾಗಿ ಹೆಚ್ ಡಿ ಕೋಟೆ ಪಟ್ಟಣದ ಬಿಜಿಎಸ್ ಭವನದಲ್ಲಿ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಮಂಡಲ ಕಾರ್ಯಕಾರಿಣಿ ಸಭೆ ನಡೀತು.ತಾಲೂಕು ಬಿಜೆಪಿ ಅಧ್ಯಕ್ಷರಾದ ಹೆಚ್ ಸಿ ಗುರುಸ್ವಾಮಿ, ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ. ಹೆಚ್ ವಿ ಕೃಷ್ಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗಾನಂದ್, ದೇವನೂರು ಪ್ರತಾಪ್, ಬಿಜೆಪಿ ಜಿಲ್ಲಾ ಸಹವಕ್ತಾರ ಸಿ.ಕೆ.ಗಿರೀಶ್ ಸೇರಿದಂತೆ ತಾಲೂಕಿನ ಬಿಜೆಪಿಯ ಹಿರಿಯ ಮುಖಂಡರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಹಿಂದುಳಿದವರು, ಬಡವರು, ರೈತರು, ಜನಸಾಮಾನ್ಯರ ಅಭಿವೃದ್ಧಿಗೆ ಅನುಕೂಲವಾಗುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇದನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಈ ಬಾರಿ ಹೆಚ್ ಡಿ ಕೋಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ತಾಲೂಕಿನ ಬಿಜೆಪಿ ಮುಖಂಡರಿಗೆ ಕಿವಿಮಾತು ಹೇಳಿದ್ರು. ತಾಲೂಕು ಬಿಜೆಪಿ ಅಧ್ಯಕ್ಷ ಹೆಚ್ ಸಿ ಗುರುಸ್ವಾಮಿ ಮಾತನಾಡಿ, ಹೆಚ್ ಡಿ ಕೋಟೆ ಕ್ಷೇತ್ರದಲ್ಲಿಈ ಬಾರಿ ಬಿಜೆಪಿ ಗೆಲ್ಲುವ ಲಕ್ಷಣಗಳು ಗೋಚರಿಸುತ್ತಿವೆ ಅಂತಾ ಹೇಳಿದ್ರು. ಇನ್ನು ಜಿಲ್ಲಾ ಸಹವಕ್ತಾರ ಗಿರೀಶ್ ಮಾತನಾಡಿ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಸಂಘಟನೆಗಾಗಿ ಹಗಲಿರುಳು ದುಡಿಯುತ್ತಿದ್ದು, ಈ ಬಾರಿ ಬಿಜೆಪಿ ಗೆಲುವು ಖಚಿತ ಅಂತಾ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದವೆಂಕಟಸ್ವಾಮಿ, ಸತೀಶ್ ಬಹದ್ದೂರ್, ಜೆಎಲ್ಆರ್ ನಿರ್ದೇಶಕರಾದ ಪರೀಕ್ಷಿತ್ ರಾಜೇ ಅರಸ್, ಜಿಲ್ಲಾ ಯುವ ಮೋರ್ಚಾ ಮಾಜಿ ಅಧ್ಯಕ್ಷರಾದ ವಿಜಯಕುಮಾರ್, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಡ್ರಿಪ್ ಸಿದ್ದನಾಯಕ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ವಿನಾಯಕ ಪ್ರಸಾದ್, ಜಿಲ್ಲಾ ಹಾಲು ಪ್ರಕೋಷ್ಠ ಸಂಚಾಲಕರಾದ ಶಿವರಾಜಪ್ಪ, ರಾಜ್ಯ ಕಾರ್ಯಕಾರಣಿಯ ಸುನಂದರಾಜು, ಸರಗೂರು ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಾಧಿಕಾ ಶ್ರೀನಾಥ್, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ಕಂಚಮಳ್ಳಿ ನಟರಾಜ್, ಮಹಾದೇವ್ ಟಿಎಪಿಸಿಎಂಎಸ್ ಅಧ್ಯಕ್ಷರಾದ ಮೊತ್ತ ಬಸವರಾಜಪ್ಪ, ತೋಟಗಾರಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಾದಾಪುರದ ನಂದೀಶ್ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮನುಗನಹಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ವಿವೇಕ್ ಚೆನ್ನಪ್ಪ, ಗೋಪಾಲಯ್ಯ, ತಾಲೂಕು ಎಸ್ಸಿ ಮೋರ್ಚಾ ಅಧ್ಯಕ್ಷ ರಾಜು, ಡಾ.ಹೆಚ್ ವಿ ಕೃಷ್ಣಸ್ವಾಮಿ ಆಪ್ತ ಸಹಾಯಕರಾದ ಶಿವಕುಮಾರ್, ಶಿವು, ಹನುಮಂತ ನಾಯಕ, ಅಗತ್ತೂರ್ ರಾಜೇಶ್ ವಕೀಲರಾದ ಕೃಷ್ಣಯ್ಯ, ಸೋಮಶೇಖರ್, ರಾಮುಲು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು. ವರದಿ : ಶ್ರೀಕಂಠ ಹಿರೇಹಳ್ಳಿ
Join The Telegram | Join The WhatsApp |