Join The Telegram | Join The WhatsApp |
ಬೆಳಗಾವಿ: ಸೋಮವಾರ ರಾತ್ರಿ ಹತ್ತು ಗಂಟೆಗೆ ವೈಕುಂಠ ಏಕಾದಶಿಯ ದಿನದಂದೇ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ದೈವಾದಿನರಾಗಿದ್ದು, ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ..
ಜಿಲ್ಲೆ, ರಾಜ್ಯ, ದೇಶದಾದ್ಯಂತ ಎಲ್ಲಾ ಕಡೆಗೂ ಶ್ರೀಗಳ ಭಕ್ತರುದ್ದು, ಅವರ ವಿಚಾರ, ವರ್ತನೆ, ಹಾಗೂ ಭೋಧನೆಗಳಿಂದ ಪುನೀತರಾದರು, ಇಂದು ಇಡೀ ಭಕ್ತಸಮೂಹ ಶ್ರೀಗಳ ಅಗಲಿಕೆಯಿಂದ ದುಃಖತೃಪ್ತವಾಗಿದೆ..
ಅದೇ ರೀತಿ ಬೆಳಗಾವಿ ನಗರದಲ್ಲಿಯೂ ಕೂಡಾ ಕೂಡಲಸಂಗಮ ಶ್ರೀ ಗಳ ದಿವ್ಯ ಸಾನಿಧ್ಯದಲ್ಲ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕ ಬೆಳಗಾವಿ ಇವರ ವತಿಯಿಂದ ನಗರದ ಗಾಂಧಿ ಭವನದಿಂದ ಚನ್ನಮ್ಮ ವೃತ್ತದವರೆಗೆ ಮೇಣದ ಬತ್ತಿಯ ಮೆರವಣಿಗೆ ಮಾಡುತ್ತಾ, ಮಧ್ಯರಾತ್ರಿ 12.00 ಘಂಟೆಗೆ ವಿಶ್ವ ಕಂಡ ಮಹಾ ಮಾನವತಾವಾದಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.
ವರದಿ ಪ್ರಕಾಶ ಕುರಗುಂದ…
Join The Telegram | Join The WhatsApp |