Join The Telegram | Join The WhatsApp |
ವರದಿ : ಮಂಜುನಾಥ. ಮಾದಾರ
ಹಳಿಯಾಳ : ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಸಂಘ ಸಂಯುಕ್ತ ಆಶ್ರಯದಲ್ಲಿ ಹಳಿಯಾಳದಲ್ಲಿ ನಡೆದ ರಾಷ್ಟ್ರ ರಾಜ್ಯಮಟ್ಟದ ಮುಕ್ತ ಕುಸ್ತಿ ಪಂದ್ಯಾವಳಿಯಲ್ಲಿ, ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ, ಶ್ರೀ ಚನ್ನಬಸವೇಶ್ವರ ಭಾರತ ಕೇಸರಿ ಪ್ರಶಸ್ತಿಯನ್ನು ಮಧ್ಯಪ್ರದೇಶದ ದೀಪಕ ಪುನಿಯಾ ತಮ್ಮದಾಗಿಸಿಕೊಂಡಿದ್ದಾರೆ 2,25,000 ರೂ ಮತ್ತು ಒಂದು ಬೆಳ್ಳಿ ಗದೆ ಎರಡನೇ ಸ್ಥಾನ ಪಡೆದ ಗೌತಮ ಹರಿಯಾಣಾ 1.10 ಲಕ್ಷ ರೂಪಾಯಿ ಹಾಗೂ ಬೆಳ್ಳಿ ಗದೆಯನ್ನು ಗೆದ್ದಿದ್ದಾರೆ.
ಕರ್ನಾಟಕ ಕಂಠೀರವ ಪ್ರಶಸ್ತಿ ಗೋಪಾಲ ಕೋಳಿ, ದ್ವಿತೀಯ ಸ್ಥಾನವನ್ನು ಪಾಂಡುರಂಗ ಸಿಂಧೆ ಪಡೆದರು. ಕರ್ನಾಟಕ ಕೇಸರಿ ಪ್ರಥಮ ಮಲ್ಲೇಶಿ ಮೇತ್ರಿ ದ್ವಿತೀಯ ಸ್ಥಾನ ಮಹೇಶ ಲಂಗೋಟಿ, ಕರ್ನಾಟಕ ಕುಮಾರ ಪ್ರಶಸ್ತಿ ರೋಹನ ಗಾವಡೆ ಪ್ರಥಮ, ಸುನಿಲ ಮೇತ್ರಿ ದ್ವಿತೀಯ, ಕರ್ನಾಟಕ ಕಿಶೋರ ಪ್ರಶಸ್ತಿ ಸಚಿನ್ ಶಿರಗುಪ್ಪಿ ಪ್ರಥಮ ರಮೇಶ್ ಹೊಸಕೋಟಿ ದ್ವಿತೀಯ, 61 ಕೆ.ಜಿ ಯ ಕರ್ನಾಟಕ ಚಾಂಪಿಯನ ಪ್ರಶಸ್ತಿ ಆನಂದ ಪ್ರಥಮ ನೀಲಪ್ಪ ಬುಜಿ ಎರಡನೆಯ, 57 ಕೆ.ಜಿ ಯ ಕರ್ನಾಟಕ ಚಾಂಪಿಯನ ರೋಹನ ದೊಡ್ಡಮನಿ ಪ್ರಥಮ ಬಾಲರಾಜ ಚೌಗುಲೆ ದ್ವಿತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಭಾರತ ಕೇಸರಿ ಪ್ರಶಸ್ತಿಯನ್ನು ಹರಿಯಾಣದ ಸುಮನ ಕುಂದು ಪಡೆದುಕೊಂಡು 50 ಸಾವಿರ ರೂ ಮತ್ತು ಬೆಳ್ಳಿ ಗಧೆ, ಸೃಷ್ಟಿ ಭೋಸ್ಲೆ ದ್ವಿತೀಯ ಸ್ಥಾನ 25 ಸಾವಿರ ರೂ ಮತ್ತು ಬೆಳ್ಳಿ ಗದೆಯನ್ನು ಪಡೆದರು.
ವೀರಮಾತೆ ಒನಕೆ ಓಬವ್ವ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ಹಳಿಯಾಳ ಕುಸ್ತಿ ಕ್ರೀಡಾ ಶಾಲೆಯ ಪ್ರಿನ್ಸಿಟಾ ಸಿದ್ದಿ , ದ್ವಿತೀಯ ಸ್ಥಾನವನ್ನು ಸೀಮಾ ಪಾಟೀಲ, 50 ಕೆ. ಜಿ. ವಿಭಾಗದಲ್ಲಿ ಶಾಲಿನಿ ಸಿದ್ದಿ ಪ್ರಥಮ ಗೋಪವ್ವ ಕೊಡಕಿ ದ್ವಿತೀಯ ಸ್ಥಾನ ಪಡೆದರು. ಒಟ್ಟು 17ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಯಿತು.
ಪಂದ್ಯಾವಳಿ ಬಗ್ಗೆ ಶಾಸಕ ಆರ್. ವಿ. ದೇಶಪಾಂಡೆ ಮಾತನಾಡಿ ಇಂದು ನಾವು ಕುಸ್ತಿ ಪಟುಗಳಿಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸಿದ್ದರಿಂದ, ನಮ್ಮ ಹಳಿಯಾಳ ತಾಲೂಕಿನ ಕುಸ್ತಿ ಪಟುಗಳು ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ, ನಮ್ಮ ಟ್ರಸ್ಟ್ ಮೂಲಕ ಮುಂದೆಯೂ ನಾವು ಹೀಗೇ ಕುಸ್ತಿಗೆ ಪ್ರೋತ್ಸಾಹ ನೀಡುತ್ತಾ ಪಂದ್ಯಾವಳಿ ನಡೆಸುವುದಾಗಿ ಹೇಳಿದರು. ಅವರ ನೇತೃತ್ವದಲ್ಲಿ ಎಲ್ಲ ಗಣ್ಯರ ಮುಖಾಂತರ ಪ್ರಶಸ್ತಿಗಳನ್ನು ನೀಡಲಾಯಿತು. ಲಕ್ಕಿ ಡ್ರಾ ಮೂಲಕ ಮಿಸ್ ಕಾಲ್ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಆಕರ್ಷಕ್ ಬಹುಮಾನ ನೀಡಲಾಯಿತು.
Join The Telegram | Join The WhatsApp |