ಮುದಗಲ್ಲ : –ಆರ್ ಪಿ ಡಿ ಟಾಸ್ಕ್ ಪೋಸ೯ ವತಿಯಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪುರಸಭೆಯ ಮುಖ್ಯಾಧಿಕಾರಿ ನಭಿಸಾಬ ಕಂದಗಲ ಜೊತೆಗೆ ಮುದಗಲ್ ಪಟ್ಟಣದ ಬೆನ್ನುಹುರಿ ಅಪಘಾತವುಳ್ಳ ವಿಕಲಚೇತನ ಮಹಿಳೆಯ ಮನೆಗೆ ಭೇಟಿ ನೀಡಿ ವಿಕಲಚೇತನ ಮಹಿಳೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡುವ ಮೂಲಕ ವಿಕಲಚೇತನ ಮಹಿಳೆಯ ಮನೆ ದುರಸ್ತಿ ಮತ್ತು ಸ್ನೇಹಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿ ಕೊಳ್ಳ ಲಾಯಿತು
ವಿಕಲಚೇತನ ಮಹಿಳೆಯ ಸಮಸ್ಯೆಯನ್ನು ಆಲಿಸಿದ ಮುಖ್ಯಾಧಿಕಾರಿ ಗಳು ಅದಷ್ಟು ಬೇಗನೆ ಮಹಿಳೆಗೆ ಶೌಚಾಲಯ ನಿರ್ಮಾಣ ಮಾಡಿಕೊಡುವ ಬರ ವಸೆಯನ್ನು ಮತ್ತು ಮಹಿಳೆಗೆ ಸ್ವಯಂ ಉದ್ಯೋಗ ಮಾಡಲು ಪುರಸಭೆಯ ಡೇ ನಲ್ಮಾ ಯೋಜನೆಯಡಿಯಲ್ಲಿ ಸಾಲಸೌಲಭ್ಯ ನೀಡುವುದಾಗಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುದಗಲ್ಲ ಪುರಸಭೆ ಮುಖ್ಯಾಧಿಕಾರಿ ನಭಿಸಾಬ ಕಂದಗಲ , ಪುರಸಭೆಯ ಯು. ಆರ್. ಡಬ್ಲ್ಯೂಗಳಾದ ಶ್ರೀಮತಿ ರೋಸ್ ಮೇರಿ, ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ಜಿಲ್ಲಾ ಖಜಾಂಚಿಯಾದ ಹುಸೇನಬಾಷಾ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ