Ad imageAd image
- Advertisement -  - Advertisement -  - Advertisement - 

ಗುಟ್ಕಾ ತಂದು ಕೊಡಲಿಲ್ಲ ಎಂದು ಬಾಲಕಿಯನ್ನ ಕೊಡಲಿಯಿಂದ ಕಿಚಕ

Bharath Vaibhav
ಗುಟ್ಕಾ ತಂದು ಕೊಡಲಿಲ್ಲ ಎಂದು ಬಾಲಕಿಯನ್ನ ಕೊಡಲಿಯಿಂದ ಕಿಚಕ
CRIME
WhatsApp Group Join Now
Telegram Group Join Now

ಕೊಪ್ಪಳ: ಜಿಲ್ಲೆಯಲ್ಲಿ ಗುಟ್ಕಾ ತಂದು ಕೊಡಲಿಲ್ಲ ಎಂಬುದಕ್ಕಾಗಿ ಸಿಟ್ಟಿನಿಂದ ಬಾಲಕಿಯ ತಲೆಗೆ ಕೋಲಿನಿಂದ ಹೊಡೆದು ಕೊಂದಿರುವಂತ ಘಟನೆ ನಡೆದಿದೆ. ಈ ಪ್ರಕರಣವನ್ನು 2 ತಿಂಗಳ ಬಳಿಕ ಪೊಲೀಸರು ಬೇಧಿಸಿದ್ದಾರೆ.ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲೇ ಇಂತದ್ದೊಂದು ಘಟನೆ ನಡೆದಿದೆ.

ಕಿನ್ನಾಳ ಗ್ರಾಮದ ಅನುಶ್ರೀ(7) ಎಂಬಂತ ಬಾಲಕಿಗೆ ಅದೇ ಗ್ರಾಮದ ಸಿದ್ಧಲಿಂಗಯ್ಯ ಎಂಬಾತ ಗುಟ್ಕಾ ತಂದು ಕೊಡುವುದಕ್ಕೆ ಹೇಳಿದ್ದಾನೆ. ಆದ್ರೇ ಆಕೆ ತಂದು ಕೊಡೋದಕ್ಕೆ ನಿರಾಕರಿಸಿದ್ದಾಳೆ.

ಈ ಕಾರಣಕ್ಕೆ ಸಿಟ್ಟಾದಂತ ಸಿದ್ದಲಿಂಗಯ್ಯ, ಬಾಲಕಿ ಅನುಶ್ರೀ ತಲೆಗೆ ಕೋಲಿನಿಂದ ಹೊಡೆದಿದ್ದಾರೆ. ಈ ಹೊಡೆತದಿಂದ ಬಾಲಕಿ ಅನುಶ್ರೀ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಇಂತಹ ಬಾಲಕಿಯ ಶವವನ್ನು ಗ್ರಾಮದ ಪಾಳು ಬಿದ್ದ ಮನೆಯೊಂದರಲ್ಲಿ ಇಟ್ಟಿದ್ದಾನೆ. ಅಲ್ಲದೇ ಸಾಕ್ಷಿ ಸಿಗದಂತೆ ಗೊಬ್ಬರದ ಚೀಲದಲ್ಲಿ ಇರಿಸಿದ್ದನು.

ಏಪ್ರಿಲ್.18ರಂದು ಬಾಲಕಿ ನಾಪತ್ತೆಯಾಗಿದ್ದಳು. ಏಪ್ರಿಲ್.20ರಂದು ಈ ಬಗ್ಗೆ ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದರು. ಏಪ್ರಿಲ್.21ರಂದು ಬಾಲಕಿ ಅನುಶ್ರೀ ಪಾಳು ಬಿದ್ದ ಮನೆಯಲ್ಲಿ ಶವವಾಗಿ ಚೀಲದಲ್ಲಿ ಪತ್ತೆಯಾಗಿದ್ದಳು.

ಈ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿದ್ದಂತ ಕೊಪ್ಪಳ ಮಹಿಳಾ ಠಾಣೆಯ ಪೊಲೀಸರು, 2 ತಿಂಗಳ ಬಳಿಕ ಅದೇ ಗ್ರಾಮದ ಆರೋಪಿ ಸಿದ್ದಲಿಂಗಯ್ಯನನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!