Ad imageAd image
- Advertisement -  - Advertisement -  - Advertisement - 

ಕಳುವಾದ ವಸ್ತುಗಳು ವಾರಸುದಾರ ರಿಗೆ ನೀಡಿದ ಚಿಂಚೋಳಿ ಪೊಲೀಸ್ ಠಾಣೆ ಅಧಿಕಾರಿಗಳು

Bharath Vaibhav
ಕಳುವಾದ ವಸ್ತುಗಳು ವಾರಸುದಾರ ರಿಗೆ ನೀಡಿದ ಚಿಂಚೋಳಿ ಪೊಲೀಸ್ ಠಾಣೆ ಅಧಿಕಾರಿಗಳು
WhatsApp Group Join Now
Telegram Group Join Now

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣ ಪೊಲೀಸ ಇಲಾಖೆ ಸಂ.ಸಿಇಐಆರ್/ಪ್ರಕಟಣೆ/2024 ಚಿಂಚೋಳಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ/ಮರೆತು ಹೋದ/ಕಾಣೆಯಾದ ಮೋಬೈಲ್ ಗಳನ್ನುCEIR ತಂತ್ರಾಂಶದಡಿ ಪತ್ತೆ ಮಾಡಿ ಕ್ರಮ ಕೈಗೊಂಡಿರುವ ಬಗ್ಗೆ ಚಿಂಚೋಳಿ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಕಳುವಾದ/ಮರೆತು ಹೋದ/ಕಾಣೆಯಾದ ಮೋಬೈಲ್ ಫೋನಗಳನು ಕೆಂದ್ರ ಸರ್ಕಾರ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ Central Equipment Identity Register (CEIR) ತಂತ್ರಾಂಶದಡಿ, ಚಿಂಚೋಳಿ ಪೊಲೀಸ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ದಿನಾಂಕ 19.06.2024 ರಂದು 08 ಮೋಬೈಲ್ ಫೋನ್ ಅ.ಕಿ.1,50,000/- ನೇದ್ದವುಗಳ ಪತ್ತೆ ಮಾಡಿ ಅವುಗಳ ವಾರಸುದಾರರಿಗೆ ವಿತರಿಸಿದ್ದು,ಮೋಬೈಲ್ ಪತ್ತೆಗಾಗಿ ಕ್ರಮ ಕೈಗೊಳ್ಳುವಲ್ಲಿ ಮಾನ್ಯ ಪೊಲೀಸ ಅಧೀಕ್ಷಕರವರು ಕಲಬುರಗಿ, ಹೆಚ್ಚುವರಿ ಪೊಲೀಸ ಅಧೀಕ್ಷಕರು, ಹಾಗೂ ಡಿ.ಎಸ್.ಪಿ ಸಾಹೇಬರವರ ಮಾರ್ಗದರ್ಶನದಲ್ಲಿ, ಶ್ರೀ ಎಲ್.ಎಚ್, ಗೌಂಡಿ ಆರಕ್ಷಕ ವೃತ್ತ ನಿರೀಕ್ಷಕರು ಚಿಂಚೋಳಿ ವೃತ್ತ ರವರ ನೆತೃತ್ವದಲ್ಲಿ, ಚಿಂಚೋಳಿ ಪೊಲೀಸ ಠಾಣೆಯ ಶ್ರೀ ಸಿದ್ದೆಶ್ವರ ಗೇರಡೆ, ಪಿ.ಎಸ್.ಐ (ಕಾ&ಸು),ಶ್ರೀ ರಾಚಯ್ಯ ಹಿರೆಮಠ ಪಿ.ಎಸ್.ಐ( ತನಿಖೆ)ಶ್ರೀ ಮಾಳಪ್ಪ, ಸಿ.ಪಿ.ಸಿ-313,  ಮಲ್ಲೇಶಪ್ಪ ಸಿ.ಪಿ.ಸಿ-573, ರವರು ತಂಡ ರಚನೆ ಮಾಡಿ ಪತ್ತೆ ಕಾರ್ಯವನ್ನು ಯಶಸ್ವಿಗೊಳಿಸಿದ್ದಕ್ಕಾಗಿ, ಇಲಾಖೆಯ ಹಿರಿಯ ಅಧಿಕಾರಿಗಳು ಶ್ಲಾಘಿಸಿದರು,ಸಂಚಾರ ವಾಹನ ಹತ್ತುವಾಗ ಇಳಿಯುವಾಗ, ಪ್ರಯಾಣ ಸಮಯದಲ್ಲಿ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚಾರ ಮಾಡುವ ಕಾಲಕ್ಕೆ ಮೋಬೈಲ್ ಫೋನ ಗಳ ಬಗ್ಗೆ ಜಾಗ್ರತೆ ವಹಿಸಲು ಸಾರ್ವಜನಿಕರಿಗೆ ವಿನಂತಿಸಿಕೊಳ್ಳಲಾಯಿತು. ಸಾರ್ವಜನಿಕರ ಸಂರಕ್ಷಣೆ ಮಾಡುವಂತಹ ಪೊಲೀಸ ಅಧಿಕಾರಿಗಳು ಅವರ ಕಷ್ಟಕಾರ್ಪಣ್ಯಗಳನ್ನು ಮರೆತು ಹಾಗೂ ಅವರ ಪ್ರತಿಯೊಂದು ಸಮಸ್ಯೆಗಳನ್ನು ಮರೆತು ಸಾರ್ವಜನಿಕ ಸೇವೆಯನ್ನು ಮಾಡುವಂತಹ ಪೊಲೀಸ್ ಅಧಿಕಾರಿಗಳಿಗೆ  ಅಭಿನಂದನೆಗಳು ಚಿಂಚೋಳಿ ತಾಲೂಕಿನ ಎಲ್ಲಾ ಸಾರ್ವಜನಿಕರಿಂದ

ವರದಿ : ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!