ವಿಜಯಪುರ: –ಕನ್ನಡ ಸಾಹಿತ್ಯ ನಮ್ಮೆಲ್ಲರ ಜೀವನದ ಉಸಿರು. ಕನ್ನಡ ನಾಡು-ನುಡಿಯ ಶ್ರೀಮಂತ ಭಾಷೆ ಹಾಗು ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ರವಿವಾರ ಜಿಲ್ಲಾ,ತಾಲೂಕ, ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ “ದಸರಾ ಕಾವ್ಯ ಸಂಭ್ರಮ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಅನೇಕ ಕವಿಗಳು,ಸಾಹಿತಿಗಳು, ಲೇಖಕರು ಕನ್ನಡ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯ ಮಾಡುವ ಮೂಲಕ ಕನ್ನಡ ಸಾಹಿತ್ಯ ಕಾರ್ಯಕ್ರಮ ನನಗೆ ತುಂಬ ಇಷ್ಟ ಎಂದರು.
ವಿಜಯಪುರ ಜಿಲ್ಲಾ ಹೆಚ್ಚುವರಿ ಪೋಲೀಸ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾಗವಹಿಸಿದ ಕವಿಗಳಲ್ಲಿ ಬಹುತೇಕರು ಮಹಿಳೆಯರಾಗಿದ್ದಾರೆ.
ನವರಾತ್ರಿಯಂದು ದಿನಕ್ಕೊಂದರಂತೆ ಒಂಭತ್ತು ದೇವಿಯನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿ ಪುನೀತರಾಗುತ್ತಾರೆ. ಸಾಹಿತ್ಯ ಪರಿಷತ್ತಿನಿಂದ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವದು ಅತ್ಯವಶ್ಯ.
ಶಿಕ್ಷಕರು ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅವರಿಗೆ ಭಾರತೀಯ ಮೌಲ್ಯಯುತ ಸ೦ಸ್ಕೃತಿಯನ್ನು ಪರಿಚಯಿಸುವ ಅವಶ್ಯಕತೆಯಿದೆ. ನಾಲ್ಕುವರೆ ಶತಮಾನದ ಇತಿಹಾಸ ಇರುವ ದಸರಾ ಹಬ್ಬ ಭಾರತೀಯರು ಆಚರಿಸುತ್ತಾ ಬಂದಿದ್ದಾರೆ. ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಸರಾ ಕಾವ್ಯ ಸಂಭ್ರಮ ಆಯೋಜಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದರು.
ಹಿರಿಯ ವೈದ್ಯ ಡಾ: ರೇಖಾ ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದಿನ ಕವಿ ಗೋಷ್ಠಿಯಲ್ಲಿ ಕವಿಗಳು ಅತ್ಯಂತ ಗುಣಮಟ್ಟದ ಕವನ ವಾಚಿಸಿದರು .ನಾಢದೇವತೆಯ ಕುರಿತು ಭಿನ್ನ ಭಿನ್ನ ಕವನಗಳು ಮೂಡಿಬಂದವು
ನವರಾತ್ರಿಯ ಮಹತ್ವ ಸಾರಿದ ಕವಿಗಳು ಬನ್ನಿ ವಿನಿಮಯ ಮಾಡಿಕೊಳ್ಳುವದರಿಂದ ಸಹೋದರತೆ ಬಾಂಧವ್ಯ ಬೆಸೆಯುವ ದಸರಾ ಹಬ್ಬ ಮಹತ್ವ ಪಡೆದುಕೊಂಡಿದೆ ಎಂದರು.
ಸಾಹಿತಿ ರೇವತಿ ಬೂದಿಹಾಳ ಮಾತನಾಡಿ ಇಂದಿನ ಕವಿಗಳು ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸುವಂತ ಕವನವಾಚನ ಮಾಡಿದ್ದು ಶ್ಲಾಘನೀಯ ಎಂದರು
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಕಸಾಪ ಗೌರವ ಕೋಶಾಧ್ಯಕರಾದ ಡಾ: ಸಂಗಮೇಶ ಮೇತ್ರಿ. ಕಸಾಪ ಸಂಘಟನಾ ಕಾರ್ಯದರ್ಶಿ ಅಭಿಷೇಕ ಚಕ್ರವರ್ತಿ.
ವಿಶ್ರಾಂತ ಕೃಷಿ ಅಧಿಕಾರಿ ,ಬಸವರಾಜ ಕೋನರಡ್ಡಿ. ವಿಪ್ರ ಸಮಾಜ ಮುಖಂಡ ಕೃಷ್ಣಾಜಿ ಕುಲಕರ್ಣಿ. ಸಾಹಿತಿ ಶೋಭಾ ಮೇಡೆದಾರ .ಆಶಾ ಬಿರಾದಾರ ವೇದಿಕೆಯ ಮೇಲಿದ್ದರು. ಸಾಹಿತಿ ಮಹಮ್ಮದಗೌಸ ಹವಾಲ್ದಾರ ಪ್ರಾಚಾರ್ಯ ಸುರೇಶ ಜತ್ತಿ ನಿರೂಪಿಸಿದರು.
ಡಾ ಸಂಗಮೇಶ ಮೇತ್ರಿ ವಂದಿಸಿದರು
ಕವಿಗೋಷ್ಠಿಯಲ್ಲಿ ಕವಿತಾ ಕಲ್ಯಾಣಪ್ಪಗೋಳ. ಬೊರಮ್ಮ ಪತಂಗಿ . ರುದ್ರಮ್ಮ ಗಿಡ್ಡಪ್ಪಗೋಳ. ಶಿಲ್ಪಾ ಹಂಜಿ. ಜಗದೀಶ ಚಲವಾದಿ .ಶೀವಲೀಲಾ ಕೋರಿ .ಶೋಭಾ ಹರಿಜನ . ಪಾವ೯ತಿ ಸೊನ್ನದ. ಪ್ರತಿಭಾ ತೊರವಿ .ಕವಿತಾ ಮುದಕವಿ. ಚಾಂದಬಿ ಬಿಜಾಪುರ. ಜಿ ಪಿ ಬಿರಾದಾರ . ಸುನಂದಾ ಕೋರಿ ಸುಮನ್ ಲಂಬು. ಅಂಬಿಕಾ ಕರಕಪ್ಪಗೋಳ. ಶಾಂತಲಾ ಪಾಟೀಲ. ಲಕ್ಷ್ಮಿ ಬಿದರಕುಂದಿ. ವಿದ್ಯಾ ಕಲ್ಯಾಣಶೆಟ್ಟಿ
ಆನಂದ ಝಂಡೆ. ಸಾವಿತ್ರಿ ಮಾನೋಜಿ ಭಾಗವಹಿಸಿದ್ದರು.
ಶ್ರಾವಣಿ ಪಾಟೀಲ ಮೇಹತಾಬ ಕಾಗವಾಡ ಸಂಗೀತ ಸೇವೆ ಸಲ್ಲಿಸಿದರು. ಎಸ್ ಎಲ್ ಇಂಗಳೇಶ್ವರ ರಜಾಕ ಮುಲ್ಲಾ ಎ ಎಮ್ ಹಳ್ಳೂರ ರಾಜೇಸಾಬ ಶಿವನಗುತ್ತಿ ಅಜು೯ನ ಶಿರೂರ. ಮಹಾದೇವಿ ತೇಲಗಿ ಶ್ರೀಧರ ಪತ್ತಾರ . ಅಣ್ಣುಗೌಡ ಬಿರಾದಾರ. ಬಸವರಾಜ ಬಿರಾದಾರ. ಮುಂತಾದವರು ಉಪಸ್ಥಿತರಿದ್ದರು.
ವರದಿ :-ಸಾಯಬಣ್ಣ. ಮಾದರ