This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

National News

ನೋಡ ಬನ್ನಿ ಬೆಳಗಾವಿಯಿಂದ 113 ಕಿಮೀ ದೂರದ ಕೊಲ್ಲಾಪುರ ನ್ಯೂ ಶಾಹು ಪ್ಯಾಲೇಸ್ ಪ್ರವಾಸಿ ತಾಣ 

Join The Telegram Join The WhatsApp

ಕೊಲ್ಲಾಪುರ : ಬೆಳಗಾವಿಯಿಂದ ಕೇವಲ 113 ಕಿಲೋಮೀಟರ್ ದೂರದ ಕೊಲ್ಲಾಪುರ ಹಲವು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ನ್ಯೂ ಶಾಹು ಪ್ಯಾಲೇಸ್ ಪ್ರಮುಖವಾದದ್ದು.

ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವು ಗಾರ್ಡನ್, ಕಾರಂಜಿ ಮತ್ತು ಕುಸ್ತಿ ಮೈದಾನವನ್ನು ಹೊಂದಿದೆ.ಇದು ಎಂಟು ಆಂಗಲ್ ಗಳನ್ನು ಮತ್ತು ಮಧ್ಯದಲ್ಲಿ ಒಂದು ಗೋಪುರವನ್ನು ಹೊಂದಿದೆ.

ದೊಡ್ಡದಾದ ಗಡಿಯಾರವನ್ನು 1877 ರಲ್ಲಿ ಕಟ್ಟಡಕ್ಕೆ ಅಳವಡಿಸಲಾಗಿದೆ. ಕಟ್ಟಡವು ಎತ್ತರವಿದ್ದು ಹಲವು ಚಿಕ್ಕ ಚಿಕ್ಕ ಗುಮ್ಮಟಗಳನ್ನು ಹೊಂದಿದೆ. ನಿಯೋ ಮೊಘಲ್ ಶೈಲಿಯ ವಾಸ್ತುಶಿಲ್ಪವನ್ನು ಇಲ್ಲಿ ಕಾಣಬಹುದು. ಮರಾಠ ಸಾಮ್ರಾಜ್ಯದ ಸ್ಥಾಪಕನಾದ ಶಿವಾಜಿಯ ವಂಶಸ್ಥರಾದ ಛತ್ರಪತಿ ಶಾಹು ಮಹಾರಾಜರ ಕುಟುಂಬದವರು ಈ ಪ್ಯಾಲೇಸಿನ ಮೊದಲ ಮಹಡಿಯಲ್ಲಿ ಈಗಲೂ ವಾಸಿಸುತ್ತಾರೆ.

ಪ್ಯಾಲೇಸಿನ ತಳ ಮಹಡಿಯನ್ನು ಮ್ಯೂಸಿಯಂ ಆಗಿ ಬಳಸಲಾಗುತ್ತದೆ. ಷಹಾಜಿ ಛತ್ರಪತಿ ಮ್ಯೂಸಿಯಂ ಎಂದು ಇದನ್ನು ಕರೆಯಲಾಗುತ್ತದೆ. ಇದು ರಾಜ-ಮಹಾರಾಜರ ಅತ್ಯುನ್ನತ ಜೀವನ ಶೈಲಿಯನ್ನು ಪ್ರದರ್ಶಿಸುತ್ತದೆ. ರಾಜ-ರಾಣಿಯರು ಬಳಸುತ್ತಿದ್ದ ಅಂದಿನ ಕಾಲದ ವಸ್ತುಗಳನ್ನು ಈ ಮ್ಯೂಸಿಯಂನಲ್ಲಿ ಕಾಣಬಹುದು.

ಅವರ ಬಟ್ಟೆಗಳು, ಆಯುಧಗಳು, ಆಟಗಳು, ಆಭರಣಗಳು, ನಾಣ್ಯಗಳು, ಪುಸ್ತಕಗಳು, ಎಂಬ್ರಾಯ್ಡರಿ ಕೆಲಸಗಳು, ಮೇಜು, ಕುರ್ಚಿ, ತೊಟ್ಟಿಲು, ಆನೆಯ ಮೇಲೆ ಹಾಕುವ ಬೆಳ್ಳಿಯ ರಕ್ಷಾಕವಚಗಳನ್ನು ಕೂಡ ನೋಡಬಹುದು.

ಬ್ರಿಟಿಷ್ ವೈಸ್ ರಾಯ್ ಹಾಗೂ ಗವರ್ನರ್ ಜನರಲ್ ಆಫ್ ಇಂಡಿಯಾದಿಂದ ಬಂದ ಪತ್ರಗಳನ್ನು ಸಹ ಪ್ರದರ್ಶನಕ್ಕಿಡಲಾಗಿದೆ. ಇಷ್ಟೇ ಅಲ್ಲದೆ ಹಲವು ತರಹದ ಬಂದೂಕುಗಳು, ಖಡ್ಗಗಳು ಅದರಲ್ಲೂ ಗೋಲ್ಡ್ ಪ್ಲೇಟೆಡ್ ಬಂದೂಕುಗಳು ಇವೆ. ಈ ಆಯುಧಗಳಲ್ಲಿ ಔರಂಗಜೇಬ್ ನ ಖಡ್ಗವು ಇದೆ.

ಪ್ಯಾಲೇಸ್ ನ ಪ್ರಮುಖ ಆಕರ್ಷಣೆ ಎಂದರೆ ದರ್ಬಾರ್ ಹಾಲ್. ಇದು ನೋಡಲು ಅತ್ಯಾಕರ್ಷಕ. ಇದು ಪ್ಯಾಲೇಸ್ ನಟ್ಟನಡುವಿನ ಭಾಗದಲ್ಲಿದೆ. ಅದ್ಭುತವಾದ ಸಿಂಹಾಸನವು ಮೆರಗನ್ನು ಹೆಚ್ಚಿಸಿದೆ.

ಮತ್ತೊಂದು ಪ್ರಮುಖವಾದ ಭಾಗವೆಂದರೆ ಫೋಟೋ ಗ್ಯಾಲರಿ. ಶಿವಾಜಿ ವಂಶಸ್ಥರ ವಿವಿಧ ಫೋಟೋಗಳನ್ನು ಹಾಗೂ ಡ್ರಾಯಿಂಗ್ ಗಳನ್ನು ಕಾಣಬಹುದು. ನಾನಾ ತರಹದ ಪ್ರಾಣಿಗಳನ್ನು ಬೇಟೆಯಾಡಿದ ಕುರುಹುಗಳಾಗಿ ಸತ್ತ ಪ್ರಾಣಿಗಳನ್ನು ಇಡಲಾಗಿದೆ.

ಬೇಟೆಯಾಡಿದ ಪ್ರಾಣಿಗಳ ಕೋಡುಗಳಿಂದ ಚಿಕ್ಕ ಮೇಜುಗಳನ್ನು ನಿರ್ಮಿಸಲಾಗಿದೆ. ಪ್ಯಾಲೇಸ್ ನ ಆವರಣದಲ್ಲಿಯೇ ಜಿಂಕೆ, ನವಿಲುಗಳಿರುವ ಚಿಕ್ಕ ಪ್ರಾಣಿ ಸಂಗ್ರಹಾಲಯವಿದೆ. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಶಾಹು ಪ್ಯಾಲೇಸ್ ಗೆ ಭೇಟಿ ನೀಡುತ್ತಾರೆ


Join The Telegram Join The WhatsApp
Bharath Vaibhav
the authorBharath Vaibhav

Leave a Reply