Join The Telegram | Join The WhatsApp |
ಅಥಣಿ : ಶೇಗುಣಸಿ ಗ್ರಾಮದಲ್ಲಿ ಸುಮಾರು 20 ಲಕ್ಷ ರೂ ವೆಚ್ಚದ ಶ್ರೀ ಸಿದ್ದಾರೂಢ ದೇವಸ್ಥಾನದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಅಥಣಿ ಶಾಸಕ ಹಾಗೂ ಕರ್ನಾಟಕ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಚಾಲನೆ ನೀಡಿದರು.
ಅವರು ಕಾಗವಾರಿಗೆ ಚಾಲನೆ ನೀಡಿ ಮಾತನಾಡುತ್ತಾ ಮತಕ್ಷೇತ್ರದ ದೇವಸ್ಥಾನಗಳ ಅಭಿವೃದ್ದಿಗಾಗಿ ವಿಶೇಷ ಕಾಳಜಿ ವಹಿಸಿದ್ದು ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಈ ವೇಳೆ ವಿವೇಕ ನಾರಗೊಂಡ, ಅಣ್ಣಪ್ಪ ಹಳ್ಳೂರ, ನಿಂಗಪ್ಪ ನಂದೇಶ್ವರ, ಕುಮಾರ ಸತ್ತಿಗೌಡರ, ಲಕ್ಷ್ಮಣ ಆಲೂರ, ಅಶೋಕ ಅಮ್ಮಣಗಿ, ಮಾಂತೇಶ ಶಾನವಾಡ, ಕಲ್ಮೇಶ ಯಲಡಗಿ ಸೇರಿದಂತೆ ಇತರರಿದ್ದರು.
ವರದಿ: ಅಬ್ಬಾಸ ಮುಲ್ಲಾ
Join The Telegram | Join The WhatsApp |