Join The Telegram | Join The WhatsApp |
ಬೆಳಗಾವಿ ಬುಧವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಭಾವಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಲಕ್ಕಣ್ಣ ಸವಸುದ್ದಿ ಈ ಮೇಲಿನಂತೆ ಆಗ್ರಹ ಮಾಡಿದ್ದಾರೆ…
ಬೆಳಗಾವಿ : ಜಿಲ್ಲೆಯ, ಗೋಕಾಕ ಮತ್ತು ಹುಕ್ಕೇರಿ ತಾಲೂಕಿನ ಮಧ್ಯಭಾಗದಲ್ಲಿ ಇರುವ ದುಪದಾಳ ಜಲಾಶಯದ ಹೊಳೆತ್ತುವ ಕಾರ್ಯ ಬಹುಬೇಗ ಆಗಬೇಕು, ಈ ಜಲಾಶಯವು 10 500 ಚದರ ಮೀಟರ್, 3000 ಎಕರೆ ವಿಸ್ತೀರ್ಣವುಳ್ಳ, 6,5 ಟಿಎಂಸಿ ಸಾಮರ್ಥ್ಯದ ಜಲಾಶಯ ಇದ್ದು, ಸುಮಾರು 9 ವಿಧಾನಸಭಾ ಮತಕ್ಷೇತ್ರಕ್ಕೆ ನೀರು ಪೂರೈಸುತ್ತದೆ..
ಅಲ್ಲದೆ ಸಾವಿರಾರು ರೈತರ ಬೆಳೆಗೆ ನೀರು ಪೂರೈಸುವ ಜಲಾಶಯವಾಗಿದೆ, ಆದ್ದರಿಂದ ಮಾನ್ಯ ಸಚಿವರು ಇದರ ಬಗ್ಗೆ ಗಮನ ಹರಿಸಿ, ತ್ವರಿತಗತಿಯಲ್ಲಿ ಈ ಜಲಾಶಯದ ಹೂಳೆತ್ತುವ ಕಾರ್ಯ ಮಾಡಬೇಕು, ಅದರ ವೆಚ್ಚಕ್ಕೆ ತಗಲುವ 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿ, ತಕ್ಷಣ ಈ ಭಾಗದ ರೈತರ ಹಿತಾಸಕ್ತಿ ಕಾಯಬೇಕೆಂದು ಈ ಮೂಲಕ ಅವರಿಗೆ ಮನವರಿಕೆ ಮಾಡುತ್ತೇವೆ ಎಂದರು..
ಸರ್ಕಾರ ಈ ಜಲಾಶಯವನ್ನು ಅಭಿವೃದ್ಧಿ ಮಾಡುವ ಮೂಲಕ ದುಪದಾಳ ಭಾಗದ ಜನರ, ರೈತರ, ಪ್ರಗತಿಯತ್ತ ಕಾರ್ಯಪ್ರವರ್ತರಾಗಬೇಕು ಎಂದು ಕ್ಷೇತ್ರದ ಜನತೆಯ ಪರವಾಗಿ ಲಕ್ಕನ್ನ ಸವಸುದ್ದಿ ಮನವಿ ಮಾಡಿದರು..
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |