Join The Telegram | Join The WhatsApp |
ಬೆಳಗಾವಿ: ಕರ್ನಾಟಕ ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರರಾದ ನಾಗರಾಜ ಯಾದವ ಅವರು ಬಿಜೆಪಿಗರ ಇತ್ತೀಚಿನ ವರ್ತನೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದಾರೆ…
ದೇಶಭಕ್ತಿ, ಹಿಂದುತ್ವ, ಸೈನಿಕರು ಎಂದು ಡೋಂಗಿ ಭಾಷಣ ಮಾಡಿ, ಕೇವಲ ರಾಜಕೀಯ ಲಾಭಕ್ಕಾಗಿ ಮಾತನಾಡಿ, ಜನರನ್ನು ಮರಳು ಮಾಡಿ, ಅಧಿಕಾರಕ್ಕೆ ಬಂದು ಇಂದು ದೇಶವನ್ನೇ ಲೂಟಿ ಮಾಡುತ್ತಿರುವವರು ಈ ಬಿಜೆಪಿಯವರು ಎಂದಿದ್ದಾರೆ..
ಮೊನ್ನೆ ಸಿಕ್ಕಿಂ ರಾಜ್ಯದಲ್ಲಿ ಭಾರತೀಯ ಸೈನಿಕರು ಪ್ರಯಾಣ ಮಾಡುತ್ತಿದ್ದ ವಾಹನವು ಅಪಘಾತ ಆಗಿ 16 ಸೈನಿಕರು ಅಸುನೀಗಿದರು,,
ಅದಾದ ನಂತರ ಆಡಳಿತ ಪಕ್ಷದ ಬಿಜೆಪಿಯವರು ಹಲವಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಒಂದೂ ಸಲವೂ ಅಸುನೀಗಿದ ಆ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಲಿಲ್ಲ, ಇಂತಾ ಡೋಂಗಿ ದೇಶಭಕ್ತರಿಗೆ ಏನೂ ಹೇಳೋದು??? ಎಂದು ವಾಗ್ದಾಳಿ ನಡೆಸಿದರು…
ಅದೇ ರೀತಿ ಮೊನ್ನೆ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಮಾಜಿ ಸೈನಿಕರ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಬಿಜೆಪಿ ನಾಯಕರಿಗೂ ಆಮಂತ್ರಣ ನೀಡಿ ಕರೆದರೂ, ಜಿಲ್ಲೆಯಲ್ಲಿ ಬಿಜೆಪಿ ಘಟಾನುಘಟಿಗಳು ಅಧಿಕಾರದಲ್ಲಿ ಇದ್ದರೂ, ಯಾರೊಬ್ಬರೂ ಬಂದಿರಲಿಲ್ಲ,,
ಅದೇ ಸಮಾವೇಶಕ್ಕೆ ಬೆಳಗಾವಿ ಕಾಂಗ್ರೆಸ್ಸಿನ ನಾಯಕರಾದ ಸತೀಶ ಜಾರಕಿಹೊಳಿ, ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರು ಭಾಗಿಯಾಗಿದ್ದರು, ಅದಕ್ಕೆ ಬೆಳಗಾವಿಯ ಬಹುತೇಕ ಮಾಜಿ ಸೈನಿಕರು ಆಡಳಿತದಲ್ಲಿ ಇರುವ ಜನಪ್ರತಿನಿಧಿಗಳಿಗೆ, ಸೈನಿಕರ ಮೇಲೆ ಏಕೆ ಇಷ್ಟು ಅಸಡ್ಡೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದರು….
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |