Join The Telegram | Join The WhatsApp |
ನವದೆಹಲಿ: ‘ ಸ್ವಾತಂತ್ರ್ಯದ ಬಳಿಕ ದೇಶದ ಜನರಿಗೆ ಒಂದೇ ದೃಷ್ಟಿಕೋನದ ಸಿದ್ಧಾಂತವನ್ನು ಹೇರಲಾಯಿತು. ಕಾಂಗ್ರೆಸ್ ಹೊರತಾಗಿ ಯಾರೊಬ್ಬರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಧೋರಣೆ ಜನರನ್ನು ತಪ್ಪು ದಾರಿಗೆ ತಂದಿತು. ಇದನ್ನು ತೀರಾ ಕುಶಲತೆಯಿಂದ ನಿರ್ವಹಣೆ ಮಾಡಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು.
ಲೇಖಕ ಸಂಜೀವ್ ಸನ್ಯಾಲ್ ವಿರಚಿತ “ರೆವಲ್ಯೂಷನರೀಸ್: ದಿ ಅದರ್ ಸ್ಟೋರಿ ಆಫ್ ಇಂಡಿಯಾ ವಿನ್ ಇಟ್ಸ್ ಫ್ರೀಡಂ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಎಷ್ಟಿದೆಯೋ, ಅಷ್ಟೇ ಪ್ರಮಾಣದಲ್ಲಿ ಬೇರೆಯವರೂ ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಅದನ್ನು ಮಾತ್ರ ಮರೆಮಾಡಿ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ’ ಎಂದರು. ‘1947 ರಿಂದಲೂ ಈ ಬಗ್ಗೆ ತದೇಕಚಿತ್ತವಾಗಿ ಸುಳ್ಳು ಬಿತ್ತುತ್ತಲೇ ಬರಲಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇನು ಎಂದು ಕಾಂಗ್ರೆಸ್ ಪದೇ ಪದೆ ಪ್ರಶ್ನಿಸುತ್ತಲೇ ಇರುತ್ತದೆ. ಇದಕ್ಕೆ ಬಿಜೆಪಿ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಕಾಂಗ್ರೆಸ್ನಿಂದ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ ಎಂದು ಬಿಜೆಪಿಯ ವಾದವಾಗಿದೆ. ಇದರ ಭಾಗವಾಗಿ ನಡೆಯುತ್ತಿರುವ ವಾದ ಪ್ರತಿವಾದಗಳು ಬಿಸಿಯೇರಿಸಿವೆ. ಇದು ಪುಸ್ತಕ ಸಮಾರಂಭದಲ್ಲೂ ಪ್ರತಿಧ್ವನಿಸಿದೆ.
Join The Telegram | Join The WhatsApp |