This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಸ್ಥಿತಪ್ರಜ್ಞೆ ಶಾಸಕ ಸತೀಶ ಜಾರಕಿಹೊಳಿ, ವೇದಿಕೆ ಮೇಲೆಯೇ ಸಮಯಪ್ರಜ್ಞೆ ಪಾಠ ಹೇಳಿಕೊಟ್ಟರಾ????

Join The Telegram Join The WhatsApp

 

ಬೆಳಗಾವಿ ಮೊನ್ನೆ ನಗರದ ಕುಮಾರ ಗಂಧರ್ವ ಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಜಿಲ್ಲಾ ಮಟ್ಟದ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು….

ಈ ಕಾರ್ಯಕ್ರಮ ಅತೀ ಅದ್ದೂರಿಯಾಗಿ ಅರ್ಥಪೂರ್ಣವಾಗಿ ಜರುಗಿದ್ದು, ಇಲ್ಲಿ ಸಾವಿರಾರು ಮಾಜಿ ಸೈನಿಕರು, ಮಾಜಿ ಅಧಿಕಾರಿಗಳು, ಅವರ ಕುಟುಂಬ ಸದಸ್ಯರು, ಸೈನ್ಯ ಸೇರಬಯಸುವ ಯುವ ಸೇನಾ ಆಕಾಂಕ್ಷಿಗಳು, ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಸಾರ್ವಜನಿಕರಿಂದ ಸೊಗಸಾಗಿ ಸಾಗುತಿತ್ತು..

ಗಣ್ಯಮಾನ್ಯರೆಲ್ಲ ಆಗಮಿಸಿದ ನಂತರ ಉದ್ಘಾಟನೆ ಆಗಿ, ಅತಿಥಿಗಳಾದ ಶಾಸಕ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಸೈನಿಕರೆಂದರೆ ಶಿಸ್ತು ಮತ್ತು ಸಮಯಪ್ರಜ್ಞೆ ಎರಡನ್ನೂ ಕೂಡಾ ತಮ್ಮ ಜೀವಮಾನದುದ್ದಕ್ಕೂ ಅಳವಡಿಸಿಕೊಂಡು ಬಂದಂತ ಶಿಸ್ತಿನ ಸಿಪಾಯಿಗಳು, ಆದಕಾರಣ ಈ ಕಾರ್ಯಕ್ರಮಕ್ಕೆ ಅವರು ನಿಗದಿ ಮಾಡಿದ ಸಮಯಕ್ಕೆ ನಾನು ಸರಿಯಾಗಿ ಇಲ್ಲಿ ಇದ್ದೆ ಎಂದರು..

ಸಮಯಪ್ರಜ್ಞೆಗೆ ಮತ್ತೊಂದು ಉದಾಹರಣೆ ನೀಡಿದ ಶಾಸಕರು, ಕೆಲ ವರ್ಷಗಳ ಹಿಂದೆ ಭಾರತೀಯ ಸೈನ್ಯದ ಒಬ್ಬ ಹಿರಿಯ ಅಧಿಕಾರಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ,, ಬೆಂಗಳೂರಿನ ಒಬ್ಬ ಕಿರಿಯ ಅಧಿಕಾರಿ ಆತನನ್ನು ಬರಮಾಡಿಕೊಳ್ಳುವ, ಸ್ವಾಗತಿಸುವ ಕೆಲಸ ವಹಿಸಿಕೊಂಡಿದ್ದ…

ಆಗ ಆ ಹಿರಿಯ ಅಧಿಕಾರಿಯ ವಿಮಾನ ಬರುವ ವಿಳಂಬದ ಕಾರಣಕ್ಕಾಗಿ ಒಂದೆರಡು ನಿಮಿಷ ತಡವಾಗಿ ಬಂದಿಳಿದರು, ಆಗ ಅವರನ್ನು ಬರಮಾಡಿಕೊಳ್ಳುವ ಕಿರಿಯ ಅಧಿಕಾರಿ, ಇವರು ಎರಡು ನಿಮಿಷ ತಡವಾಗಿ ಬಂದಿದ್ದಾರೆ, ನಾನು ಇವರನ್ನು ಬರಮಾಡಿಕೊಳ್ಳಲು ಆಗುವದಿಲ್ಲ ಎಂದು ಸೈನಿಕ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿ, ಅಲ್ಲಿಂದ ಹೊರಟುಹೋದರು…

ಅದಕ್ಕಾಗಿಯೇ ಇಂತಹ ಸೈನಿಕರ ಕಾರ್ಯಕ್ರಮಕ್ಕೆ ನಾನು ಸರಿಯಾದ ಸಮಯಕ್ಕೆ ಬಂದಿರುವೆ ಎಂದು ಹೇಳಿ, ಈ ಕಾರ್ಯಕ್ರಮಕ್ಕೆ ತಡವಾಗಿ ಬಂದಂತ ಜನಪ್ರತಿನಿಧಿಗಳಿಗೆ ಸಮಯಪ್ರಜ್ಞೆಯ ಬಗ್ಗೆ ಪರೋಕ್ಷವಾಗಿ ಪಾಠ ಮಾಡಿದಂತಿತ್ತು…

ಇನ್ನು ಮುಂದೆಯಾದರೂ ಯಾವುದೇ ಕಾರ್ಯಕ್ರಮಕ್ಕೆ, ಯಾರನ್ನು ಕಾಯಿಸದೇ ಸಮಯಕ್ಕೆ ಸರಿಯಾಗಿ ಹಾಜರಾಗಿ, ಉತ್ತಮ, ಶಿಸ್ತುಬದ್ದ ಪದ್ಧತಿಯನ್ನು ಅನುಸರಿಸಿ ಎಂಬ ಮಾತಿನ ದಾಟಿಯಲ್ಲಿ ಚಾಟಿ ಬೀಸಿದಂತಿತ್ತು…

ವರದಿ ಪ್ರಕಾಶ ಕುರಗುಂದ..


Join The Telegram Join The WhatsApp
Bharath Vaibhav
the authorBharath Vaibhav

Leave a Reply