Ad imageAd image

ಸಂವಿಧಾನ ಕೋಟ್ಯಂತರ ಜನರ ಭಾವನೆ ಮತ್ತು ಬದುಕಾಗಿದೆ : ಮೋದಿ 

Bharath Vaibhav
ಸಂವಿಧಾನ ಕೋಟ್ಯಂತರ ಜನರ ಭಾವನೆ ಮತ್ತು ಬದುಕಾಗಿದೆ : ಮೋದಿ 
MODI
WhatsApp Group Join Now
Telegram Group Join Now

ನವದೆಹಲಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಸಂವಿಧಾನದ ಬಗ್ಗೆ ಎರಡು ದಿನದ ಚರ್ಚೆ ನಡೆದಿದೆ.

ಲೋಕಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ ಮೋದಿ, ಭಾರತ ಪ್ರಜಾಪ್ರಭುತ್ವದ ತಾಯಿ ಇದ್ದಂತೆ. ಭಾರತದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿವೆ.

ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ನಾವು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂವಿಧಾನ ಕೋಟ್ಯಂತರ ಜನರ ಭಾವನೆ ಮತ್ತು ಬದುಕಾಗಿದೆ ಎಂದು ಹೇಳಿದ ಮೋದಿ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಗುಣಗಾನ ಮಾಡಿದ್ದಾರೆ.

75 ವರ್ಷಗಳ ಈ ಸಾಧನೆ ಸಾಮಾನ್ಯವಲ್ಲ, ಅಸಾಮಾನ್ಯವಾದುದು, ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಭಾರತಕ್ಕೆ ವ್ಯಕ್ತವಾದ ಸಾಧ್ಯತೆಗಳನ್ನು ಸೋಲಿಸಿ ಭಾರತದ ಸಂವಿಧಾನ ನಮ್ಮನ್ನು ಇಲ್ಲಿಗೆ ತಂದಿದೆ. ಸಾಧನೆ, ಸಂವಿಧಾನದ ಕರಡುಗಳ ಹೊರತಾಗಿ, ನಾನು ಭಾರತದ ಕೋಟಿಗಟ್ಟಲೆ ಜನರ ಮುಂದೆ ಗೌರವಪೂರ್ವಕವಾಗಿ ತಲೆಬಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!