Join The Telegram | Join The WhatsApp |
ಬೆಳಗಾವಿ: ನಗರದ ಮಾದಿಗ ಸಮುದಾಯದ ಎಲ್ಲಾ ಭಾಂದವರಿಗೆ, ಮಾದಿಗ ಸಮುದಾಯದ ಮೀಸಲಾತಿ ರಾಜ್ಯಮಟ್ಟದ ಹೋರಾಟದಲ್ಲಿ ಭಾಗಿಯಾಗಲು ಉತ್ತಮ ಅವಕಾಶವಿದ್ದು ಆಸಕ್ತಿ ಹೊಂದಿದವರು ಹೋರಾಟದ ಜಿಲ್ಲಾ ಅಧ್ಯಕ್ಷರನ್ನು ಸಂಪರ್ಕಿಸಲು ತಿಳಿಸಲಾಗಿದೆ…
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಒತ್ತಾಯಿಸಿ, ಮಾದಿಗ ಹೋರಾಟ ಸಮಿತಿಯ ಸಂಸ್ಥಾಪಕರಾದ ಹಾಗೂ ಎಂಆರ್ ಏಚ್ಎಸ್ ನ ಪ್ರಧಾನ ಸಂಚಾಲಕರಾದ ಎಸ್ ಮಾರೆಪ್ಪ ಅವರ ನೇತೃತ್ವದಲ್ಲಿ ಇದೆ ನವೆಂಬರಿನ 28 ರಿಂದ ಡಿಸೆಂಬರ್ 11ರ ವರೆಗೆ ಹರಿಹರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ…
ಆದಕಾರಣ ಬೆಳಗಾವಿ ಜಿಲ್ಲೆಯಿಂದ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜತೆಗೂಡಿ, ಸಮುದಾಯದ ಮುಖಂಡರು, ಹೋರಾಟಗಾರರು, ಆಸಕ್ತಿ ಇರುವ ಯುವಸಮುದಾಯ, ಯಾರಾದರೂ ಪಾದಯಾತ್ರೆಯಲ್ಲಿ ಭಾಗಿಯಾಗುವ ವಿಚಾರದಲ್ಲಿದ್ದರೆ, ಬೆಳಗಾವಿಯ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಅರವಳ್ಳಿ ಅವರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ…
ಸಂಪರ್ಕ ಸಂಖ್ಯೆ.. 9880446924..
ವರದಿ: ಪ್ರಕಾಶ ಕುರಗುಂದ.
Join The Telegram | Join The WhatsApp |