Join The Telegram | Join The WhatsApp |
ಬೆಳಗಾವಿ : ಸೋಮವಾರ ವಿಧಾನ ಪರಿಷತ್ ಸದನದಲ್ಲಿ ಕಾಂಗ್ರೆಸ್ ಸದಸ್ಯರಾದ ಪಿ ಆರ್ ರಮೇಶ ಅವರು ಇತ್ತೀಚೆಗೆ ಸಮಾಜ ಕಂಟಕವಾಗಿ ಹಾವಳಿ ಎಬ್ಬಿಸಿರುವ ಕೆಲ ಸಾಮಾಜಿಕ ಜಾಲತಾಣಗಳ ಬಗ್ಗೆ ಪ್ರಶ್ನೆ ಮಾಡಿದರು..
ಇತ್ತೀಚಿನ ನಮ್ಮ ದೇಶದ ಯುವ ಸಮುದಾಯ ಎತ್ತ ಸಾಗುತ್ತಿದೆ, ರಾತ್ರಿ ಆದರೆ ಸಾಕು ಮೊಬೈಲ್ನಲ್ಲಿ ಬೇಡವಾದ ವಿಷಯಗಳೇ ಬರುತ್ತವೆ, ನಮ್ಮ ಯುವ ಸಮುದಾಯವು ಕೂಡಾ ಅಂತಾ ಅಶ್ಲೀಲ ವಿಷಯಗಳ ದಾಸರಾಗಿ ಹಾಳಾಗುತ್ತಿದ್ದಾರೆ..
ಆಡಳಿತ ಪಕ್ಷ ಯಾವದೇ ವಿಷಯ ಇಟ್ಟುಕೊಂಡು ದೀನ ಅದರ ಬಗ್ಗೆ ಚಿಂತೆ ಮಾಡೋದು ಬಿಟ್ಟು, ಇಂತಹ ಗಂಭೀರ ಸಮಸ್ಯ ಬಗ್ಗೆ ಚಿಂತಿಸಿ, ಈ ಅಶ್ಲೀಲ ಮಾಹಿತಿ ನೀಡುವ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ, ಅವರಿಗೆ ಶಿಕ್ಷೆ ಆಗುವಂಥ ಕಾನೂನು ಮಾಡಲಿ ಎಂದರು…
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ರೀಲ್ಸ್ಸ್, ಮುಂತಾದವುಗಳಲ್ಲಿ ಅಶ್ಲೀಲ ದೃಶ್ಯ, ಪದಬಳಕೆ ಮೂಡಿ ಬರುತ್ತಿದ್ದು, ಶಾಲಾ ಕಾಲೇಜು ಮಕ್ಕಳು ಇದರಿಂದ ವಿಪರೀತ ದಾರಿ ತಪ್ಪುತ್ತಿದ್ದಾರೆ ಎಂದರು..
ಇಲ್ಲ, ಯುವಜನ ರಾತ್ರಿ ಪೂರಾ ಇಂತಾ ನಶೆಭರಿತ ವಿಡಿಯೋ ಮಾಡಿಕೊಂಡು, ಹವ್ಯಾಸಿಗಳಾಗಿ ಹಾಳಾಗಿ ಹೋಗಲಿ, ನಾವು ಬೇಕಾ ಬಿಟ್ಟಿ ದುರಾಡಳಿತ ನಡೆಸುತ್ತೇವೆ ಎನ್ನುವ ವಿಚಾರ ತಮ್ಮಲ್ಲಿದ್ದರೆ ಅದನ್ನೂ ತಿಳಿಸಿ ಎಂದು ಗೃಹಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು..
ನಂತರ ಮಾತನಾಡಿದ ಗೃಹ ಸಚಿವರು ಇದಕ್ಕೆ ಸಂಭದಿಸಿದಂತೆ ತಗೆದುಕೊಂಡು ಕ್ರಮಗಳ ಬಗ್ಗೆ ಸದನದಲ್ಲಿ ವಿವರಣೆ ನೀಡಿದರು..
ವರದಿ : ಪ್ರಕಾಶ್ ಕುರಗುಂದ
Join The Telegram | Join The WhatsApp |