Join The Telegram | Join The WhatsApp |
ಬೆಳಗಾವಿ : ರಾಜ್ಯದಲ್ಲಿನ ಪ್ರಮುಖ ಸುಕ್ಷೇತ್ರಗಳಲ್ಲೊಂದಾದ ಸವದತ್ತಿ ಯಲ್ಲಮ್ಮನ ಜಾತ್ರೆ ಜ. 6 ರಂದು ಬನದ ಹುಣ್ಣಿಮೆ ಪ್ರಯುಕ್ತ ವಿಜೃಂಭಣೆಯಿಂದ ಜರುಗಲಿದೆ.
ಈ ಹುಣ್ಣಿಮೆಯಿಂದ ಆರಂಭವಾದ ಜಾತ್ರೆ ಮುಂದಿನ ಭಾರತ ಹುಣ್ಣಿಮೆಯವರೆಗೆ ತಿಂಗಳ ಪರ್ಯಂತ ನಡೆಯುವುದು ವಿಶೇಷವಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದ ಸಪ್ತಕೊಳ್ಳಗಳಲ್ಲಿ ನೆಲೆಸಿರುವ ರೇಣುಕಾ ದೇವಿಯ ಖ್ಯಾತಿ ಅಪಾರವಾದದ್ದು.
ತಲತಲಾಂತರದಿಂದ ಕ್ಷೇತ್ರ ಜಾಗೃತ ಸ್ಥಾನವಾಗಿದೆ.
ಸಪ್ತಕೊಳ್ಳ, ಸಪ್ತಗುಡ್ಡ, ಸಪ್ತ ದೇವಸ್ಥಾನ ಹೊಂದಿರುವ ತಾಣವಿದು. ಈ ಕಾರಣಕ್ಕಾಗಿ ಏಳುಕೊಳ್ಳದ ಯಲ್ಲಮ್ಮದೇವಿ ಎನ್ನುವ ಪ್ರತೀತಿ ಇದಕ್ಕಿದೆ.
ಸರ್ವ ಮತಗಳ ಭಕ್ತರು ಯಲ್ಲಮ್ಮದೇವಿ ಆರಾಧಕರು. ಇಲ್ಲಿ ಹುಣ್ಣಿಮೆ ದಿನ ಮಾತ್ರ ಜಾತ್ರೆ ಜರುಗಲಿದೆ. ಪ್ರತಿ ಶುಕ್ರವಾರ, ಮಂಗಳವಾರ ಮತ್ತು ಹುಣ್ಣಿಮೆಗಳಂದು ಜಾತ್ರೆ ನಡೆಯುತ್ತದೆ.
ಭಕ್ತರು ದೇವಿ ದರ್ಶನ ಪಡೆಯುವ ಮೊದಲು ಎಣ್ಣೆ ಹೊಂಡಕ್ಕೆ ಹೋಗಿ ಅಲ್ಲಿ ಹರಿಯುವ ನೀರಿನಿಂದ ದೈಹಿಕ ಕ್ರಿಯೆಗಳನ್ನು ಮುಗಿಸಿ ನಂತರ ತೀರ್ಥರೂಪದಲ್ಲಿ ಎಣ್ಣೆ ಹೊಂಡದ ಜಲ ಸೇವಿಸುತ್ತಾರೆ.
ಬನದ ಹುಣ್ಣಿಮೆಯಂದು ಇಲ್ಲಿ ನಡೆಯುವ ದೇವಿ ಜಾತ್ರೆಗೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಅಸಂಖ್ಯ ಭಕ್ತರು ಆಗಮಿಸುತ್ತಾರೆ.
Join The Telegram | Join The WhatsApp |