Join The Telegram | Join The WhatsApp |
ಕೋಯಿಕ್ಕೋಡ್ : ಕೇರಳದ ತೃತೀಯಲಿಂಗಿ ದಂಪತಿ ಮಗುವಿಗೆ ತಂದೆ ತಾಯಿಯಾಗುತ್ತಿದ್ದಾರೆ. ಇದು ಅಚ್ಚರಿ ಎನಿಸಿದರೂ ಸತ್ಯ! ಕೇರಳದ ಕೋಯಿಕ್ಕೋಡ್ನ ಡ್ಯಾನ್ಸರ್ ಜಿಯಾ ಪಾವಲ್ ಹಾಗೂ ಜಹಾದ್ ತಾವು ತಂದೆ ತಾಯಿ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದು, ಜಿಯಾ ಪಾವಲ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮುಂದಿನ ತಿಂಗಳು ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಘೋಷಿಸಿದ್ದಾರೆ. ಇದು ದೇಶದಲ್ಲೇ ಮೊದಲ ತೃತೀಯಲಿಂಗಿ ಗರ್ಭಧಾರಣೆ ಮಾಡಿರುವುದಾಗಿದೆ.
ಸಾಮಾನ್ಯರಂತೆ ಈ ತೃತೀಯಲಿಂಗಿ ದಂಪತಿ ಕೂಡ ವಿಭಿನ್ನವಾಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಸೇರ್ ಮಾಡಿಕೊಂಡು, ತಂದೆ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಇನ್ನು ನೃತ್ಯಗಾರ್ತಿಯಾಗಿರುವ ಜಿಯಾ ಪಾವಲ್ ಹಾಗೂ ಜಾಹದ್ ಕಳೆದ ಮೂರು ವರ್ಷಗಳಿಂದ ಜೊತೆಯಾಗಿ ವಾಸಿಸುತ್ತಿದ್ದಾರೆ.
ಜಿಯಾ ಪಾವಲ್ ಅವರು ಹುಡುಗನಾಗಿ ಜನಿಸಿದ್ದರು. ಆದರೆ ಬೆಳೆಯುತ್ತ ಮಹಿಳೆಯಾಗಿ ಬದಲಾಗಿದ್ದರು. ಹಾಗೆಯೇ ಜಹಾದ್ ಹುಡುಗಿಯಾಗಿ ಹುಟ್ಟಿ, ಬೆಳೆಯುತ್ತಾ ಪುರುಷನಾಗಿ ರೂಪಾಂತರಗೊಂಡರು.
ಇಬ್ಬರೂ ತಮ್ಮಲ್ಲಾಗುತ್ತಿದ್ದ ಲಿಂಗ ಪರಿವರ್ತನೆಯನ್ನು ಅರಿತು ತಮ್ಮ ಪ್ರೌಢಾವಸ್ಥೆಯಲ್ಲಿಯೇ ಕುಟುಂಬವನ್ನು ತೊರೆದು ಬಂದಿದ್ದರು. ಹೆರಿಗೆಯ ನಂತರ, ಈಗ ತಾಯಿಯಾಗಿ ಮಗುವನ್ನು ಗರ್ಭದಲ್ಲಿ ಹೊತ್ತಿರುವ ಜಹಾದ್ ತಂದೆಯಾಗಿ, ಜಿಯಾ ಪಾವಲ್ ತಾಯಿಯಾಗಿ ಮಗುವನ್ನು ಸಾಕಿ ಸಲುಹಲಿದ್ದಾರೆ.
ನೃತ್ಯಗಾರ್ತಿ ಜಿಯಾ ಪಾವಲ್ ಇನ್ಸ್ಟಾಗ್ರಾಂನಲ್ಲಿ ತಮ್ಮ ಜೊತೆಗಾರ ಜಹಾದ್ ಈಗ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಮಾರ್ಚ್ ತಿಂಗಳಿನಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.
‘ನನ್ನ ತಾಯಿಯಾಗುವ ಕನಸು ಹಾಗೂ ಅವನು ತಂದೆಯಾಗುವ ಕನಸು ನನಸಾಗುತ್ತಿದೆ. ಎಂಟು ತಿಂಗಳ ಭ್ರೂಣ ಜಹಾದ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ನನಗೆ ತಿಳಿದ ಮಾಹಿತಿ ಪ್ರಕಾರ ಇದು ಭಾರತದಲ್ಲಿ ಮೊದಲ ತೃತೀಯಲಿಂಗಿ ಗರ್ಭಧಾರಣೆಯಾಗಿದೆ.
Join The Telegram | Join The WhatsApp |