Join The Telegram | Join The WhatsApp |
ನವ ದೆಹಲಿ: ದಿಗ್ಗಜ ಕಂಪನಿ ಡಾಬರ್ ಇಂಡಿಯಾ ಲಿಮಿಟೆಡ್, ಬಾದ್‌ಶಾ ಮಸಾಲಾ ಕಂಪನಿಯಲ್ಲಿನ 51% ಷೇರುಗಳನ್ನು ಖರೀದಿಸಿದೆ.
ಡಾಬರ್ ಇಂಡಿಯಾ ಲಿಮಿಟೆಡ್ 99,528 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.ಲಾರ್ಜ್ ಕ್ಯಾಪ್ ಕಂಪನಿಯ ಸಾಲಿಗೆ ಸೇರಿದೆ. 2023ರ ಜನವರಿ 2ರಂದು ಡೀಲ್ ಪೂರ್ಣವಾಗಿದೆ.
ಡಾಬರ್ ಇಂಡಿಯಾ ಷೇರು ದರ ಮಂಗಳವಾರ 562 ರೂ.ಗಳ ಮಟ್ಟದಲ್ಲಿ ಇತ್ತು. ಈ ಹಿಂದಿನ ದರಕ್ಕೆ ಹೋಲಿಸಿದರೆ ಏರಿಕೆಯಾಗಿದೆ. ಡಾಬರ್ ಇಂಡಿಯಾ 139 ವರ್ಷ ಹಳೆಯ ಎಫ್‌ಎಂಸಿಜಿ ಕಂಪನಿಯಾಗಿದ್ದು, ಉದ್ಯಮಿ ಎಸ್‌ಕೆ ಬರ್ಮನ್ 1884ರಲ್ಲಿ ಸ್ಥಾಪಿಸಿದ್ದರು.
ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬಾದ್‌ಶಾ ಮಸಾಲಾ ಮುಂಬಯಿ ಮೂಲದ ಕಂಪನಿಯಾಗಿದ್ದು, 1958ರಲ್ಲಿ ಸ್ಥಾಪನೆಯಾಗಿದೆ.
Join The Telegram | Join The WhatsApp |