ಕಲ್ಬುರ್ಗಿ:- ಜಿಲ್ಲೆಯಲ್ಲಿರುವ ಕಾಳಗಿ ತಾಲೂಕು ಘೋಷಣೆಯಾಗಿ ಸುಮಾರು 4ರಿಂದ 5 ವರ್ಷಗಳು ಗತಿಸಿದ್ದರು ಇಲ್ಲಿವರೆಗು ಸಾರ್ವಜನಿಕರ ಪರದಾಟ ತಪ್ಪಿಲ್ಲ, ಉದಾಹರಣೆಗೆ ರೈತರ ಹೊಲಗಳನ್ನು ರಜಿಸ್ಟರ್ ಮಾಡಲು ಚಿತ್ತಾಪುರ ಮತ್ತು ಚಿಂಚೋಳಿ ಎಂದು ಎರಡು ಕಡೆ ಅಲೆದಾಡಬೇಕು, ಹಾಗೂ ನೋಂದಣಿ ಅರ್ಜಿ ಹಾಕಲು ಕಾಳಗಿ – ಕೊಡ್ಲಿ ಹೋಗಬೇಕು, ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ವಿದ್ಯಾಭ್ಯಾಸಕ್ಕಾಗಿ ವ್ಯಾಸಂಗ ಪ್ರಮಾಣ ಪತ್ರ ಪಡೆಯಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪುರ ಮತ್ತು ಚಿಂಚೋಳಿ ಅಲೆದಾಡಬೇಕು, ಹೀಗೆ ರೈತರು ವಿದ್ಯಾರ್ಥಿಗಳು ಕಾರ್ಮಿಕರು ಒಂದು ಕೆಲಸ ಮಾಡಿಕೊಳ್ಳಬೇಕಾದರೆ ಸುಮಾರು ದಿನಗಳ ಕಾಲ ಅಲೆದಾಡುವಂತೆ ಆಗಿದೆ ಇದರಿಂದ ಹಣ ವ್ಯಯ ಹಾಗೂ ಸಮಯ ವ್ಯರ್ಥ ವಾಗುತ್ತಿದೆ, ಸಾರ್ವಜನಿಕರ ಗೋಳು ಸರ್ಕಾರಕ್ಕೆ ಮುಟ್ಟುತಿಲ್ಲ, ಆದ್ದರಿಂದ ತಾಲೂಕಿನ ಸಮಸ್ಯೆಗಳು ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕೆ ತಂದು ಸಾರ್ವಜನಿಕರ ಅನುಕೂಲಕ್ಕಾಗಿ ಈ ಬೇಡಿಕೆಗಳನ್ನು ಈಡೇರಿಸಬೇಕು,
ಕಾಳಗಿ ತಾಲೂಕವನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಬೇಕು, ಸಾಬ್ ರಿಜಿಸ್ಟರ್ ಕಚೇರಿ ಪ್ರಾರಂಭಿಸಬೇಕು, ತಾಲೂಕ ನ್ಯಾಯಾಲಯ ಪ್ರಾರಂಭಿಸಬೇಕು, ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಾರ್ಯಾಲಯ ಪ್ರಾರಂಭಿಸಬೇಕು, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತಾಲೂಕ ಸಮಾಜ ಕಲ್ಯಾಣ ಇಲಾಖೆ, ತಾಲೂಕ ಆರೋಗ್ಯ ಇಲಾಖೆ, ತಾಲೂಕ ಅರಣ್ಯ ಅಧಿಕಾರಿಗಳ ಕಚೇರಿ, ತಾಲೂಕ ಅಗ್ನಿಶಾಮಕ ದಳ ಕಚೇರಿ, ತಾಲೂಕ ತೋಟಗಾರಿಕೆ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕಾ ಶಿಶು ಅಭಿವೃದ್ಧಿ ಕಚೇರಿ, ತಾಲೂಕಾ ಕೃಷಿ ಮಾರುಕಟ್ಟೆ ಕಚೇರಿ, ಪ ಜಾತಿ ಮತ್ತು ಪ ಪಂಗಡ ವಸತಿ, ಸರ್ಕಾರಿ ಐ ಟಿ ಐ ಕಾಲೇಜು ಪ್ರಾರಂಭಿಸಬೇಕು, ಕಾಳಗಿ ಪಟ್ಟಣದಲ್ಲಿ ಸಾರ್ವಜನಿಕ ಬಸ್ ನಿಲ್ದಾಣ ಹತ್ತಿರ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು, ಕಾಳಗಿ ಪಟ್ಟಣದಲ್ಲಿ ಸಂತೆ ಮಾರುಕಟ್ಟೆ ಪ್ರಾರಂಭಿಸಬೇಕು, ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದವರೆಗೆ ಸಾರ್ವಜನಿಕರು ಓಡಾಡುವಂತೆ ರಸ್ತೆ ಎರಡು ಬದಿಗೆ ಫುಟ್ಪಾತ್ ನಿರ್ಮಿಸಬೇಕು, ಕಣಸೂರ್ ಗೋಟೂರ ಮದ್ಯ ಇರುವ ಬ್ರಿಜ್ಜನ್ನು ಮೇಲ್ದರ್ಜೆಕೆ ಏರಿಸಬೇಕು, ಕಾಳಗಿ ಪಟ್ಟಣದಲ್ಲಿ ಸಾರ್ವಜನಿಕ ಉದ್ಯಾನವನ ನಿರ್ಮಿಸಬೇಕು, ತಾಲೂಕ ಆಡಳಿತ ಕಾರ್ಯಸೌಧ ನಿರ್ಮಾಣ ಮಾಡಬೇಕು, ಭೂಮಾಪನ ಇಲಾಖೆ ಪ್ರಾರಂಭಿಸಬೇಕು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಾರಂಭಿಸಬೇಕು, ಅತಿವೃಷ್ಟಿ ಮಳೆಯಿಂದ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಕುರಿಗಳು ಸಾವಿಗೀಡಾಗಿದ್ದು, ಹಾನಿಯಾದ ಮಾಲೀಕರಿಗೆ ಪರಿಹಾರ ಧನವನ್ನು ಶೀಘ್ರದಲ್ಲಿ ಮಂಜೂರು ಮಾಡಬೇಕು, ಕಾಳಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆ ಸಮರ್ಪಕವಾಗಿ ಜಾರಿಗೋಳಿಸಬೇಕು, ಹಾಗೂ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಗೆ ತಂದು ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸಬೇಕು, ಕಾಳಗಿ ತಾಲೂಕಿನ ಕೋಡ್ಲಿ ವೃತ್ತದಲಿರುವ ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಕಾಳಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಂಗವಿಕಲ ಕಲ್ಯಾಣ ನಿಧಿ 4% ಅನುದಾನ ಸಮರ್ಪಕವಾಗಿ ಜಾರಿಗೊಳಿಸಬೇಕು, ಗೃಹಲಕ್ಷ್ಮಿ ಯೋಜನೆಯಲ್ಲಿ ಆಯ್ಕೆಯಾಗಿ ಹಣ ಜಮೆ ಆಗದ ಫಲಾನುಭವಿಗಳಿಗೆ ಶೀಘ್ರವಾಗಿ ಹಣ ಮಂಜೂರು ಮಾಡಬೇಕು, ಕಾಳಗಿ ತಾಲೂಕಿನ ಕುಡ್ಹಳ್ಳಿ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿ ನಂ 36 ಮಾಲೀಕರು ಪಡಿತರ ಚೀಟಿದಾರರ ಹತ್ತಿರ ರೇಷನ್ ವಿತರಣೆ ಮಾಡಲು 20 ರೂಪಾಯಿ ಪಡೆದು ಕೊಡುವ ಅಕ್ಕಿಯಲ್ಲೇ 1 ಕೆಜಿ ಕಡಿಮೆ ಕೊಡುತ್ತಿದ್ದಾರೆ ಈ ಅಕ್ರಮದಲ್ಲಿ ಭಾಗಿದಾರರಾದ ನ್ಯಾಯಬೆಲೆ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪರವಾನಿಗೆ ರದ್ದುಪಡಿಸಬೇಕು, ಕಾಳಗಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕು, ಕಳಗಿ ತಾಲೂಕಿನಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿಯು ಕಳಪೆ ಮಟ್ಟದಿಂದ ನಡೆಯುತ್ತಿದ್ದು ಈ ಕಾಮಗಾರಿ ಕುರಿತು ತನಿಖೆ ಕೈಗೊಂಡು ಈ ಕಳಪೆ ಕಾಮಗಾರಿಯಲ್ಲಿ ಭಾಗಿದಾರರಾದ ಗುತ್ತಿಗೆದಾರರ ಮೇಲೆ ಮೇಲೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಈ ಎಲ್ಲಾ ಬೇಡಿಕೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈಡೇರಿಸಬೇಕೆಂದು ದಲಿತ ಸೇನೆ ತಾಲೂಕ ಸಮಿತಿ ವತಿಯಿಂದ ತಹಸೀಲ್ದಾರ್ ರವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು, ಈ ಸಂದರ್ಭದಲ್ಲಿ ಮೋಹನ್ ಎಸ್ ಚಿನ್ನ ದಲಿತ ಸೇನೆ ಜಿಲ್ಲಾ ವಿದ್ಯಾರ್ಥಿ ಒಕೂಟ ಅಧ್ಯಕ್ಷರು ಕಲಬುರ್ಗಿ, ಕತಲಪ್ಪ ಅಂಕನ್ ದಲಿತ್ ಸೇನೆ ಕಾಳಗಿ ತಾಲೂಕ ಅಧ್ಯಕ್ಷರು, ನಾಗರಾಜ ಬೇವಿನಕಾರ್ ದಲಿತ ಸೇನೆ ಕಾರ್ಯಧ್ಯಕ್ಷರು ಕಾಳಗಿ, ಸಿದ್ದು ಗೊಟೂರು ದಲಿತ ಸೇನೆ ಜಿಲ್ಲಾ ವಿ ಒ ಉಪಾಧ್ಯಕ್ಷರು ಕಲಬುರ್ಗಿ, ಚೇತನ್ ನಿರಾಳಕಾರ್, ಮಾರುತಿ ಕಣಸೂರ ದಲಿತ ಸೇನೆ ಯುವ ಘಟಕ ಉಪಾಧ್ಯಕ್ಷರು, ಜೈ ಭೀಮ ಅರೆ ಜಂಬಗಾ, ಮಾರುತಿ ತೆಲಗತಿಪ್ಪಿ ದಲಿತ ಸೇನೆ ತಾಲೂಕ ಉಪಾಧ್ಯಕ್ಷರು, ಹಣಮಂತ ಸಾಲಹಳ್ಳಿ ದಲಿತ ಸೇನೆ ತಾಲೂಕ ಉಪಾಧ್ಯಕ್ಷರು, ಹಣಮಂತ್ ಕಲಗುರ್ತಿ, ಕೃಷ್ಣ ತೆಂಗಳಿ, ಖಲೀದ್ ಖುರೇಷಿ ದಲಿತ ಸೇನೆ ನಗರ ಅಧ್ಯಕ್ಷರು ಕಾಳಗಿ, ಮೀರಜ್ ಪಟೇಲ್ ದಲಿತ ಸೇನೆ ನಗರ ಉಪಾಧ್ಯಕ್ಷರು ಕಾಳಗಿ, ಕಪಿಲ್ ಚಿಂಚೋಳಿ, ಆಕಾಶ ಹೆಬ್ಬಾಳ್ ಉಪಸ್ಥಿತರಿದ್ದರು
ವರದಿ : ಹಣಮಂತ ಕುಡ್ಹಳ್ಳಿ