Join The Telegram | Join The WhatsApp |
ಚಿಕ್ಕಬಳ್ಳಾಪುರ : ಕೊತ್ತೂರು ಮಂಜುನಾಥ್ ಯಾರು ಮಂಜು…?ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ದಲಿತ ನಾಯಕರಲ್ಲಿ ನನ್ನ ಮನವಿ ಈ ಕೊತ್ತುರು ಮಂಜುನಾಥ್ ಯಾರು ಇವರ ಹಿನ್ನಲೆ ಏನು ..? ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಸಿ.ಮೀಸಲಾತಿಯಲ್ಲಿ ಗೆದ್ದು.5ವರ್ಷಗಳ ಕಾಲ ದಲಿತರ ಮೀಸಲಾತಿಯಲ್ಲಿ ಹೈಶಾರಾಮಿ ಜೀವನ ಮಾಡಿ ಅಧಿಕಾರ ಅನುಭವಿಸಿದ ಮಂಜುನಾಥ್ ಅವರು ದಲಿತರು ಅಲ್ಲ ಇವರು ಮೀಸಲಾತಿಗೆ ಅರ್ಹರು ಅಲ್ಲ ಎಂದು ಅತ್ತುನ್ಯತ ನ್ಯಾಯಸ್ಥಾನ ಅದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಾರ್ಯಾಂಗ. ಶಾಸಕಾಂಗ. ನ್ಯಾಯಾಂಗ. ಬದ್ದವಾಗಿ ಇವರು ದಲಿತರು ಅಲ್ಲದೆ ಇದ್ದರೂ ಸಹ 5ವರ್ಷಗಳು ದಲಿತರ ಮೀಸಲಾತಿ ಅಧಿಕಾರ ಅನುಭವಿಸಿದ ಮಂಜುನಾಥ್ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಅಲ್ಲವೇ? ಬೇರೆಯವರ ಮೀಸಲಾತಿ ದಲಿತರಿಗೆ ಸಿಗುವುದೇ? ಒಂದು ಕ್ಷಣ ಯೋಚಿಸಿ.
ಇಡೀ ದಲಿತ ಸಮುದಾಯ ಮಂಜುನಾಥ್ ವಿರುದ್ಧ ಹೋರಾಟ ಮಾಡಿ ದಲಿತರ ಮೀಸಲಾತಿ ಅಧಿಕಾರ ಅನುಭವಿಸಿದ ಹಿನ್ನೆಲೆಯಲ್ಲಿ ಇವರನ್ನು ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು. ಅದು ಬಿಟ್ಟು ಮತ್ತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಇವರನ್ನು ತಂದು ಇಲ್ಲಿರುವ ದಲಿತ ಹಿಂದುಳಿದ ವರ್ಗಗಳ ಅಧಿಕಾರ ಮತ್ತೊಮ್ಮೆ ಇವರಿಗೆ ಕೊಟ್ಟು ಮತ್ತೊಮ್ಮೆ ಇವರನ್ನು ವಿಧಾನಸಭೆಗೆ ಕಲಿಸುವ ಹುನ್ನಾರ ಕಾಂಗ್ರೆಸ್ ಪಕ್ಷದಿಂದ ಮಾಡಲು ಹೊರಟಿರುವುದು ಮಾತ್ರ ಬಹಳ ಶೋಚನೀಯ ಸಂಗತಿ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರ ಮತಗಳು ಇದ್ದು ಇವರ ಮತಗಳನ್ನು ಸೆಳೆಯಲು ಹುನ್ನಾರ ನಡೆಯುತ್ತಿದೆ
ಎಚ್ಚರ.. ಎಚ್ಚರ… ಈಗಾಗಲೇ ಮುಳಬಾಗಿಲು ತಾಲ್ಲೂಕಿನ ಜನತೆ ಇವರು ದಲಿತರು ಎಂದು ಒಂದು ಸಲ ಮೋಸ ಹೋಗಿದ್ದಾರೆ ಇಲ್ಲಿರುವ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಎಚ್ಚರ ವಹಿಸಿ ಹಾಗೂ ಯೋಚ್ನೆ ಮಾಡಿ ಇವರನ್ನು ಗೆಲ್ಲಿಸಿ ಮುಳಬಾಗಿಲು ತಾಲ್ಲೂಕಿನ ಕೊತ್ತುರೂ ಗ್ರಾಮಕ್ಕೆ ಇಲ್ಲಿರುವ ಜನತೆ ಹೋಗಬೇಕಾ. ಅಂದ್ರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾರು ಇಲ್ಲವಾ.
ದಲಿತರೇ… ಸ್ವಲ್ಪ ಯೋಚಿಸಿ ನಮ್ಮ ದಲಿತರ ಮೀಸಲಾತಿ ಅಧಿಕಾರ ಈಗಾಗಲೇ 5ವರ್ಷ ಅನುಭವಿಸಿ ಈಗ ಇವರ ಕಣ್ಣು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಿದೆ ಇನ್ನೆಷ್ಟು ವರ್ಷಗಳು ಇಂತವರ ಕೈ ಗೊಂಬೆಗಳಾಗಿ ನಾವು ಬದುಕಬೇಕು ನಮಗೆ ಸ್ವಾಭಿಮಾನ ಇಲ್ಲವೇ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಲಿತರ ಮತ ಪಡೆದು ದಲಿತರ ಮೀಸಲಾತಿ ತಿಂದು ದಲಿತರಿಗೆ ಮತ್ತೆ ಮೋಸ ಮಾಡುವ ಯಾರಿಗೆ ಆಗಲಿ ಮತ ನೀಡುವ ಮುನ್ನಾ ಎಚ್ಚರ…ಎಚ್ಚರ..
ವರದಿ ಎಂ ಆನಂದ್
Join The Telegram | Join The WhatsApp |