ಇಲಕಲ್:- ವಿ ಎಸ್ ಎಸ್.ವಿಷ್ಟು ಸೇನಾ ಸಂಘಟನೆ (ರಿ) ಬಾಗಲಕೋಟೆ ಇಳಕಲ್ ತಾಲ್ಲೂಕು ಘಟಕ ಹಾಗೂ ಸ್ವರಸಿಂಧು ಮೆಲೊಡೀಸ್ (ರಿ), ಇಳಕಲ್ ವತಿಯಿಂದ ಡಾ||ವಿಷ್ಣುವರ್ಧನ್ ರವರ 73ನೇ ಜನ್ಮದಿನೋತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ಅವರು ಉದ್ಘಾಟಿಸಿ ಮಾತನಾಡಿದರು.
ಪೂಜ್ಯ ಶ್ರೀ ಗುರುಮಹಾಂತಶ್ರೀಗಳು ಹಾಗೂ ಪೂಜ್ಯ ಫೈಸಲ್ ಪಾಷಾ ಗುರುಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಂದ್ರು ಬಿ ಅಪ್ಪಾಜಿ ಅವರ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಶ್ರೀ ರಾಜುಗೌಡ, ರಾಜ್ಯಾಧ್ಯಕ್ಷರು, ವಿಷ್ಣು ಸೇನಾ ಸಂಘಟನೆ ಬೆಂಗಳೂರು ಹಾಗೂ ಶ್ರೀಧರಮೂರ್ತಿ, ವಿಷ್ಣುವರ್ಧನ್ ಅವರ ದತ್ತು ಪುತ್ರ ಬೆಂಗಳೂರು ಸೇರಿದಂತೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ. ದಾವಲ್. ಶೇಡಂ