Join The Telegram | Join The WhatsApp |
ಬಾಗಲಕೋಟೆ :ನಿರಂತರ ಮಳೆಯಿಂದಾಗಿ ಗುರುವಾರ ಬೆಳಗಿನ ಜಾವ ನಗರದ ಕಿಲ್ಲಾ ಓಣಿ ರಾಘವೇಂದ್ರ ಮಠದ ಹತ್ತಿರವಿರುವ ಮನೆಯೊಂದರ ಮೇಲ್ಚಾವಣಿ ಕುಸಿದ ಪರಿಮಾಣ ಸುಧಾಭಾಯಿ ಪ್ರಹ್ಲಾದರಾವ್ ಕಾವೇರಿ (81) ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಒಂದು ಗಂಟೆಯಲ್ಲಿ ಪರಿಹಾರ ವಿತರಣೆಗೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ಕ್ರಮವಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮೃತಪಟ್ಟ ಕುಟುಂಬಕ್ಕೆ ತಹಶೀಲ್ದಾರ ವಿನಯಕುಮಾರ ಪಾಟೀಲ 5 ಲಕ್ಷ ರೂ.ಗಳ ಪರಿಹಾರದ ಚೆಕ್‍ನ್ನು ವಿತರಿಸಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಮೂಲಕ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದ ವೃದ್ದೆಯ ಮೃತದೇಹ ಹೊರ ತೆಗೆದಿದ್ದಾರೆ..
Join The Telegram | Join The WhatsApp |