Join The Telegram | Join The WhatsApp |
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕೈವಲ್ಯಾಪುರ ಗ್ರಾಮ, ರೈತ ಸಂಘದ ವಿಜಯನಗರ ಜಿಲ್ಲಾ ಕಾರ್ಯದರ್ಶಿ ಹಾಗೂ ಬೋವಿ ಸಮಾಜದ ಯುವ ಮುಖಂಡರಾಗಿದ್ದ. ವಡ್ಡರ (ವಿ)ನಾಗರಾಜ(47), ಸೆ 28ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕೆಲ ದಶಕಗಳಿಂದ ರೈತ ಸಂಘದ ಮುಖಾಂತರ ಸಮಾಜ ಸೇವೆಯಲ್ಲಿ ಮೈಗೂಡಿಸಿಕೊಂಡಿದ್ದರು,ರೈತರ ಸೇವೆಯಲ್ಲಿ ನಿರಂತರ ತಮ್ಮನ್ನು ತೊಡಗಿಸಿಕೊಂಡಿದ್ದರು. ತಾಲೂಕು, ಜಿಲ್ಲೆಯ ನಾಡಿನಲ್ಲಿ ಜರುಗಿರುವ ಅಸಂಖ್ಯಾತ ರೈತ ಪರ ಹೋರಾಟಗಳಲ್ಲಿ , ನಾಗರಾಜರವರು ಸಕ್ರೀಯವಾಗಿ ಪಾಲ್ಗೊಂಡಿದ್ದರು. ಅವರು ತುಂಬು ಕುಟುಂಬವನ್ನು, ಅಪಾರ ಬಂಧು ಬಳಗ ಸಮಾಜದ ಭಾಂಧವರನ್ನು ಬಿಟ್ಟಗಲಿದ್ದಾರೆ. ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆ ಯನ್ನು ಸೆ29ರಂದು ಸಂಜೆ, ಕೈವಲ್ಯಾಪುರ ಗ್ರಾಮದಲ್ಲಿ ಜರುಗಿಸಲಾಗುವುದು. ಸಂತಾಪ: ರೈತಪರ ಹೋರಾಟಗಾರ ವಡ್ಡರ ನಾಗರಾಜರವರ ಅಗಲಿಕೆಗೆ, ರೇತ ಸಂಘಗಳ ರಾಜ್ಯ ಮುಖಂಡರು ಹಾಗೂ ಪದಾಧಿಕಾರಿಗಳು,ಜಿಲ್ಲಾ ಘಟಕಗಳ ಮುಖಂಡರು ಹಾಗೂ ಪದಾಧಿಕಾರಿಗಳು. ವಿಜಯನಗರ ಜಿಲ್ಲೆಯ ರೈತ ಮುಖಂಡರಾದ ಕೆ.ಕೆ.ಹಟ್ಟಿ ದೇವರ ಮನಿ ಮಹೇಶ, ಕಕ್ಕುಪ್ಪಿ ಬಸವರಾಜ ಸೇರಿದಂತೆ ಜಿಲ್ಲೆಯ ರೈತ ಪ್ರಮುಖರು. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತೆ ರೈತರು, ರೈತ ಸಂಘಟನೆಗಳ ಗ್ರಾಮ ಘಟಕಗಳ ಮುಖಂಡರು ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ವ್ಯೆಕ್ತಪಡಿಸಿದ್ದಾರೆ. ಬೋವಿ ಸಮಾಜ ಸೇರಿದಂತೆ ವಿವಿದ ಸಮಾಜದ ಪ್ರಮುಖರು,ವಿವಿದ ಸಂಘ ಸಂಸ್ಥೆಗಳ ಪ್ರಮುಖರು, ವಿವಿದ ಜನಪ್ರತಿನಿಧಿಗಳು, ರೈತ ಕಾರ್ಮಿಕರು, ಕಾರ್ಮಿಕರು, ಪತ್ರಕರ್ತರು,ಸಮಾಜ ಸೇವಕರು ಸಂತಾಪ ವ್ಯೆಕ್ತಪಡಿಸಿದ್ದಾರೆ.
ವಿ.ಜಿ.ವೃಷಭೇಂದ್ರ
Join The Telegram | Join The WhatsApp |