Join The Telegram | Join The WhatsApp |
ಉಡುಪಿ : ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಸುಮಾರು ಐದು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಹಿಂದೂ ಧರ್ಮದ ಭಾಷಣ ಗಾರ್ತಿಯಾಗಿರುವ ಚೈತ್ರ ಕುಂದಾಪುರ ಅವರ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಬಯಲಾಗುತ್ತಿವೆ.
ಇದೀಗ ಉಡುಪಿಯ ಉಪ್ಪುರಿನ ಶ್ರೀರಾಮ ಸಹಕಾರ ಸಂಘದ ಲಾಕರ್ ಕುರಿತು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಉಪ್ಪುರಿನ ಶ್ರೀರಾಮ ಸಹಕಾರ ಸಂಘದ ಲಾಕರ್ ನಲ್ಲಿ ಚೈತ್ರಾಗೆ ಸಂಬಂಧಪಟ್ಟಂತಹ ಹಣ ಚಿನ್ನಾಭರಣಗಳು ಹಾಗೂ ಆಸ್ತಿಯ ಪತ್ರಗಳು ಸಿಸಿಬಿ ಅಧಿಕಾರಿಗಳು ತನಿಖೆ ನಡೆಸಿದಂತಹ ಸಂದರ್ಭದಲ್ಲಿ ಪತ್ತೆಯಾಗಿವೆ, ಎಷ್ಟೋ ಭಾಗದಲ್ಲಿ ಚೈತ್ರ ಶ್ರೀಕಾಂತ್ ಹೆಸರಲ್ಲಿ ಆಸ್ತಿಯನ್ನು ಖರೀದಿಯನ್ನು ಮಾಡಿದ್ದರು ಎನ್ನುವ ವಿಚಾರಗಳು ಇದೀಗ ಬಯಲಾಗುತ್ತಿದೆ.
ಆರೋಪಿ ಶ್ರೀಕಾಂತ್ ಬ್ಯಾಂಕ್ ಲಾಕರ್ ನಲ್ಲಿ ಚೈತ್ರ ಖಜಾನೆ ಪತ್ತೆಯಾಗಿದೆ ಶ್ರೀಕಾಂತ್ ಹೆಸರಲ್ಲಿ ಚೈತ್ರಾಳ ಹಣ ಚಿನ್ನ ಆಸ್ತಿಪತ್ರ ಪತ್ತೆಯಾಗಿದ್ದು 1 ಕೋಟಿ 8 ಲಕ್ಷ ಆಸ್ತಿ ಪತ್ರ, 40 ಲಕ್ಷ ಹಣ ಹಾಗೂ 65 ಲಕ್ಷದ ಮೌಲ್ಯದ ಚಿನ್ನಾಭರಣ ಬ್ಯಾಂಕಿನಲ್ಲಿ ಇರಿಸಿದ್ದಳು ಎಂದು ತಿಳಿದುಬಂದಿದೆ.
Join The Telegram | Join The WhatsApp |