ನವದೆಹಲಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂದು ಅವರು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಸೋಲನುಭವಿಸುವ ಮೂಲಕ ನಿರಾಶೆ ಮೂಡಿಸಿದರು.
29 ವರ್ಷ ವಯಸ್ಸಿ ನ ಪಿ.ಯು. ಸಿಂಧು ಅವರು 61 ನಿಮಿಷಗಳಲ್ಲೇ ಮುಗಿದ ಪಂದ್ಯದಲ್ಲಿ 21-19, 13-21,13-21 ಮೂರು ಸೆಟ್ ಗಳ ಪಂದ್ಯದಲ್ಲಿ ಆಘಾತ ಅನುಭವಿಸಿದರು. ಸದ್ಯ ವಿಶ್ವದ 16 ನೇ ಶ್ರೇಯಾಂಕಿತೆ ಆಗಿರುವ ಪಿ.ವಿ. ಸಿಂಧು ಅವರು ಈ ಪಂದ್ಯದಲ್ಲಿ ಆರಂಭವನ್ನು ಚೆನ್ನಾಗಿಯೇ ಮಾಡಿದ್ದರು. ಆರಂಭ ಸೆಟ್ ನಲ್ಲಿ ಅವರು ಒಂದು ಹಂತದಲ್ಲಿ 11-7 ರಿಂದ ಮುನ್ನಡೆ ಸಾಧಿಸಿದ್ದರು.
ಆದರೆ ನಂತರ ವರು ಮೊದಲ ಸೆಟ್ ಅನ್ನು 21-19 ರಲ್ಲಿ ಗೆಲ್ಲಲು ಸಾಕಷ್ಟು ಬೆವರು ಹರಿಸಬೇಕಾಯಿತು. ಸ್ವಲ್ಪ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆಟಗಾರ್ತಿ ನಿರ್ಣಾಯಕ ಎರಡೂ ಸೆಟ್ ಗಳನ್ನು 13-21, 13-21 ರಲ್ಲಿ ಸೋಲ ಬೇಕಾಯಿತು. ಅವರು ತಮ್ಮ ಗಾಯದ ಸಮಸ್ಯೆಯನ್ನು ನೀಗಿಸಿಕೊಂಡು ಆಡಲು ವಿಫಲರಾದರು.