Join The Telegram | Join The WhatsApp |
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮರಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಬೀರಲು ಗುಡ್ಡ ಗ್ರಾಮದ (ವೀರನ ದುರ್ಗ) ಹೊನ್ನೂರ ಸ್ವಾಮಿ ಗುಡಿ ಹತ್ತಿರ. ಮ್ಯಾಸರ ಹಟ್ಟಿ ಗ್ರಾಮದ ಬಡಲಡಕು ಈರಣ್ಣ ಎಂಬುವರಿಗೆ ಸೇರಿದ ಎತ್ತನ್ನು, ಮಧ್ಯಾಹ್ನ ಮೂರು ಗಂಟೆಗೆ ಗ್ರಾಮದ ಹೊರವಲಯದ ಗುಡ್ಡದಲ್ಲಿ ಮೇಯಿತಲಿದ್ದ , ಎತ್ತಿನ ಮೇಲೆ ಚಿರತೆ ದಾಳಿ ಮಾಡಿದೆ ಪರಿಣಾಮ ಎತ್ತು ಸತ್ತಿದೆ. ಗಮನಿಸಿದ ನೆರೆ ಹೊರೆಯವರು ಕೂಗಾಡಿದ್ದರಿಂದಾಗಿ, ಚಿರತೆ ಬೆಧರಿ ಓಡಿ ಹೋಗಿದೆ. ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಕೂಡಲೇ, ಚಿರತೆಯನ್ನು ಹಿಡಿದು ಬೇರೆ ಕಡೆ ಸಾಗಿಸಬೇಕೆಂದು ಅಲ್ಲಿನ ಗ್ರಾಮಸ್ಥರು ಕುರಿ ಕಾಯುವವರು ದನ ಕಾಯೋರು ಆಕ್ರೋಶ ಒತ್ತಾಯಿಸಿಸಿದ್ದಾರೆ ವಿ.ಜಿ.ವೃಷಭೇಂದ್ರ
Join The Telegram | Join The WhatsApp |