ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ವರ್ಷ ಮುಂಗಾರುಪೂರ್ವದಲ್ಲಿಯೇ ಡೆಂಘಿಪ್ರಕರಣಗಳು ಹೆಚ್ಚಾಗಿದ್ದು, 4 ತಿಂಗಳಲ್ಲಿ ಬರೋಬ್ಬರಿ 1,201 ಮಂದಿಯಲ್ಲಿ ಜ್ವರ ದೃಢಪಟ್ಟಿದೆ.
ರಾಜ್ಯಾದ್ಯಂತ ಇದುವರೆಗೂ 24,296 ಮಂದಿಯ ರಕ್ತದ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಹೆಚ್ಚು 485 ಪ್ರಕರಣ ದೃಢಪಟ್ಟಿದ್ದು, ತುಮಕೂರು 78, ಕಲಬುರಗಿ 65, ಶಿವಮೊಗ್ಗ 49, ಧಾರವಾಡ 47, ಚಿತ್ರದುರ್ಗ 43, ಬಳ್ಳಾರಿ 41 ಸೇರಿ ರಾಜ್ಯದ ಎಲ್ಲ # 4 ತಿಂಗಳಲ್ಲಿ 1,201 ಜಿಲ್ಲೆಗಳಲ್ಲೂ ಡೆಂಘ ವರದಿಯಾಗಿದ್ದು, ಪ್ರಕರಣಗಳು ದೃಢ 1,201 ಮಂದಿ ಸೋಂಕಿನಿಂದ ಬಳಲಿದ್ದಾರೆ.
ಕಳೆದ ವರ್ಷಾಂತ್ಯಕ್ಕೆ 32 ಸಾವಿರಕ್ಕೂ ಅಧಿಕ ಡೆಂಘಿ ಪ್ರಕರಣ ವರದಿಯಾಗಿತ್ತು. 16 ಮಂದಿ ಮೃತಪಟ್ಟಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಸುರಿದ ಮಳೆಯಿಂದಾಗಿ ಮುಂಗಾರು ಪೂರ್ವದಲ್ಲಿಯೇ ಪ್ರಕರಣಗಳು ಹೆಚ್ಚಳವಾಗುವಾಗಿದ್ದು, ಈಗಾಗಲೆ ಆರೋಗ್ಯ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಲಾರ್ವ ಪತ್ತೆ ಮತ್ತು ನಾಶ ಪಡಿಸುವ ಕಾರ್ಯ ಕೈಗೊಂಡಿದೆ.