Join The Telegram | Join The WhatsApp |
ಬೆಳಗಾವಿ : ಗ್ರಾಮೀಣ ಬಿಜೆಪಿ ಘಟಕದ ಮುಖಂಡರಾದ ಧನಂಜಯ ಜಾಧವ ಅವರ ಮುಂದಾಳತ್ವದಲ್ಲಿ ನಾವಾಗೆ ಗ್ರಾಮದ ಸಮೀಪ ಬ್ರಹತ್ ಹಿಂದೂ ಸಮಾವೇಶ ಏರ್ಪಡಿಸಲಾಗಿದೆ ….
ಈ ದಿನ ಭಾರತದ ಮಾಜಿ ಪ್ರಧಾನಿಯಾದ ಅಜಾತಶತ್ರು ಎನಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಗಿದ್ದು, ಅವರ ಭಾವಚಿತ್ರಕ್ಕೆ, ಭಾರತ ಮಾತೆ, ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು…
ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಹಿಂದೂ ಸಂಘಟನೆಯ ಪದಾಧಿಕಾರಿಗಳು ಭಾಗಿಯಾದ ಈ ಸಮಾವೇಶದಲ್ಲಿ ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಮಹತ್ವ, ಇತಿಹಾಸ, ಹಾಗೂ ಮೌಲ್ಯದ ಕುರಿತು ಮಾತನಾಡಿದರು…
ವೇದಿಕೆ ಮೇಲೆ ಮಾತನಾಡಿದ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷರಾದ ಧನಂಜಯ ಜಾಧವ ಅವರು ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹಣದ ಆಸೆ ತೋರಿಸಿ, ಗುಡಿ ಕಟ್ಟಿಸಿ ಕೊಡುತ್ತೇವೆ, ಅಭಿವೃದ್ದಿ ಮಾಡಿದ್ದೇವೆ ಎಂದು ಸುಳ್ಳು ಹೇಳುವ ಶಾಸಕರಿಗೆ ಮೊನ್ನೆ ತಾರಿಹಾಳ ಗ್ರಾಮದಲ್ಲಿ ಜನ ತಿರುಗಿ ಬಿದ್ದಿದ್ದಾರೆ,,
ಶಾಸಕರೇನು ಅವರ ಮನೆಯಿಂದ ಹಣ ಕೊಡುತ್ತಾರೆ ಏನು? ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮ್ಮವು ಇವೆ,
ಇಲ್ಲಿವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಔರಂಗಜೇಬ ಸರ್ಕಾರ ನಡೆದಿದೆ, ಅದರ ಆಯುಷ್ಯ ಮುಗಿದಿದೆ, ಇನ್ಮುಂದೆ ಜನರ ರಾಜ್ಯದ ಪರ್ವ ಶುರುವಾಗುತ್ತೆ ಎಂದರು…
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |