Join The Telegram | Join The WhatsApp |
ಧಾರವಾಡ:ಧಾರವಾಡದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದ್ದು ಪ್ರಾಣಿ ರಕ್ಷಕ ಸೋಮಶೇಖರ್ ಎಂಬುವವರಿಗೆ ಸಿಕ್ಕಿದ್ದ ಹಾವಿನ ಪ್ರಾಣವನ್ನು ವೈದ್ಯರು ಉಳಿಸಿದ್ದಾರೆ.
ಮನೆಯೊಂದರಲ್ಲಿ ಆಭರಣ ಹಾವು ಸಿಕ್ಕಿದ್ದು ಅದನ್ನು ರಕ್ಷಿಸಿ ಹೊರಗೆ ಬಿಡೊವಾಗ ತಲೆ ಮೇಲೆ ಉಬ್ಬು ಇರೋದು ಪತ್ತೆಯಾಗಿದೆ. ಅದನ್ನು ಪ್ರಾಣಿ ರಕ್ಷಕ ಸೋಮಶೇಖರ ಕೃಷಿ ವಿವಿ ಪಶು ಚಿಕಿತ್ಸಾ ವಿಭಾಗಕ್ಕೆ ತಂದಿದ್ದು ವೈದ್ಯ ಡಾ. ಅನಿಲಕುಮಾರ ಪಾಟೀಲ ಹಾವನ್ನು ಪರಿಶೀಲಿಸಿದ್ದಾರೆ.
ತಪಾಸಣೆ ಮಾಡುವಾಗ ಹಾವಿಗೆ ಕ್ಯಾನ್ಸರ್ ಗಡ್ಡೆ ಇರುವುದ ಖಚಿತವಾಗಿದ್ದು ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ಡಾ. ಅನಿಲಕುಮಾರ ಹೊರತೆಗೆದಿದ್ದಾರೆ. ಸದ್ಯ ಹಾವು ಆರೋಗ್ಯವಾಗಿದ್ದು ಪ್ರಣಿ ಪ್ರಿಯ ಸೋಮಶೇಖರ್ ಆರೈಕೆಯಲ್ಲಿದೆ
Join The Telegram | Join The WhatsApp |