Join The Telegram | Join The WhatsApp |
ಸೇಡಂ: ತಾಲೂಕಿನ ರಿಬ್ಬನ್ ಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತಲೂ ಸಹ ಕಸ ,ಮದ್ಯ ಬಾಟಿಲ್ ಗಳು ಸೇರಿದಂತೆ ಯಾವುದೇ ಸ್ವಚ್ಛತೆ ಇಲ್ಲದೆ ದನಗಳ ಕೊಠಡಿ ಅಂತೆ ಆಗಿದೆ ಎಂದು ತಾಲೂಕಿನ ಮುಧೋಳ್ ವಲಯ ಡಿಎಂಎಸ್ಎಸ್ ಅಧ್ಯಕ್ಷರಾದ ಭಿಮು ಮುಧೋಳ್ ಇವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಾಮಾನ್ಯವಾಗಿ ಮನುಷ್ಯನಿಗೆ ರೋಗಗಳು ಬಂದರೆ ಆಸ್ಪತ್ರೆಗೆ ಹೋಗುತ್ತಾರೆ ಆದರೆ ಇಲ್ಲಿ ಹಾಗಲ್ಲ ಇಡೀ ಆಸ್ಪತ್ರೆ ಪರಿಸ್ಥಿತಿ ಸದ್ಯ ಅನಾರೋಗ್ಯದಿಂದ ಸಾರ್ವಜನಿಕರು ಬಂದರೆ ಇಲ್ಲಿನ ವ್ಯವಸ್ಥೆಗೆ ಅವರು ಇನ್ನಷ್ಟು ರೋಗಿಗಳು ಆಗುವ ದೃಶ್ಯಗಳು ನಾವಿಲ್ಲಿ ಗಮನಿಸಬಹುದು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಮೇಲಾಧಿಕಾರಿಗಳು ಈ ಪರಿಣಾಮವನ್ನು ಗಮನಕ್ಕೆ ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಆಸ್ಪತ್ರೆಯನ್ನು ಮಾಡಿಕೊಡಬೇಕು ಹಾಗೂ ಇಲ್ಲಿ ಸರಿಯಾದ ವೈದ್ಯರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಿಎಂಎಸ್ಎಸ್ ಮುಧೋಳ್ ವಲಯ ಅಧ್ಯಕ್ಷರಾದ ಭೀಮು ಮುಧೋಳ್, ತಾಲೂಕ ಉಪಾಧ್ಯಕ್ಷರಾದ ಅಶೋಕ್ ಮೆದಕ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶನಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಊರಿನ ಹಿರಿಯರು ಸ್ಥಳದಲ್ಲಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |