This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಮಟ್ಟೂರು; ಮಕ್ಕಳ ದಿನಾಚರಣೆ ಅಂಗವಾಗಿ ಉಚಿತ ನೋಟ್ ಬುಕ್ ವಿತರಣೆ …

Join The Telegram Join The WhatsApp

ಮುದಗಲ್ ಪಟ್ಟಣದ ಸಮೀಪದ ಮಟ್ಟೂರು ಸರ್ಕಾರಿ ಪ್ರಾಥಮಿಕ ಹಾಗೂ ಪೌಡಶಾಲೆ ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರ ಶಶಿಮುರಳಿ ಮಾತೃಭೂಮಿ ಸೇವಾ ಪ್ರತಿಷ್ಠಾನ (ರಿ) ಬೆಂಗಳೂರು ಹಾಗೂ ಮಹೇಂದ್ರ ಮುನೋತ್ ಗೋ ಸೇವಕರು, ಮಾಲೀಕರು ಮಾರುತಿ ಮೆಡಿಕಲ್ ಸ್ಟೋರ್ ವಿಜಯನಗರ ಬೆಂಗಳೂರು ರವರ ಸಹಯೋಗದೊಂದಿಗೆ ಶಶಿಮುರಳಿ ಟ್ರಸ್ಟ್ ನ ಸದಸ್ಯರಾದ ಅಮರೇಶ ಮಡಿವಾಳರ್ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದ ಅವರು ನಾನು ಕೂಡ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ
ಶಾಲೆಯಲ್ಲಿ ಓದಿದ್ದು ಅದ್ದರಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಇಂತಹಾ ನೋಟ್ ಬುಕ್ ಉಪಯುಕ್ತ ವಾಗಲಿ ಹಾಗೂ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಅತ್ಯುತ್ತಮ. ಆದ್ದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಾಗಿದೆ ಎಂದರು.

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಆದ್ದರಿಂದ ಮುಂದಿನ ದಿನಗಳಲ್ಲಿ ನೀವು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಕೆಲಸವನ್ನು ಮಾಡಬೇಕು, ಈ ನೋಟ್ ಬುಕ್ ಬಹಳ ವಿಶೇಷವಾಗಿದೆ ಇದರಲ್ಲಿ ವಿಧ್ಯಾರ್ಥಿಗಳ ನಡುವಳಿಕೆ, ಶಿಸ್ತು, ಗುರು-ಹಿರಿಯರಿಗೆ ಗೌರವ ಕೊಡುವ, ಸ್ವತಂತ್ರ ಹೋರಾಟಗಾರರ ಭಾವಚಿತ್ರ ಹಾಗೂ ಸಂಚಿಪ್ತ ಮಾಹಿತಿ, ಮಹಾನ್ ದೇಶ ಭಕ್ತರ ಭಾವಚಿತ್ರ ಅವರ ಮಾಹಿತಿ, ಭಾರತದ ಗತ ವೈಭವ ಇತಿಹಾಸ ಇನ್ನೂ ಅನೇಕ ವಿಷಯಗಳನ್ನೊಳಗೊಂಡ ನೋಟ್ ಬುಕ್ ನಿಮಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡುವಂತಹದ್ದು ಕಾರಣ ನೀವು ಮೊದಲು ನೋಟ್ ಬುಕ್ ನ್ನು ಸಂಪೂರ್ಣ ಓದಿ ತಿಳಿದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಪಾದಕರಾದ ಹನುಮಂತ ನಾಯಕ, ಮುಖ್ಯಾ ಗುರುಗಳು ಹಾಗೂ ಶಿಕ್ಷಕರು, ವಿಧ್ಯಾರ್ಥಿಗಳು ಸೇರಿದಂತೆ ಇನ್ನಿತರರು ಇದ್ದರು.

ವರದಿ: ಮಂಜುನಾಥ ಕುಂಬಾರ


Join The Telegram Join The WhatsApp
Bharath Vaibhav
the authorBharath Vaibhav

Leave a Reply