Join The Telegram | Join The WhatsApp |
ಬೆಳಗಾವಿ : ಮಾನ್ಯ ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರ ಮಾಡುವ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ರೂ 10,000 ರೂ 20000 ಹಾಗೂ 50,000 ರೂ ಕಿರು ಸಾಲ ಸೌಲಭ್ಯ ನೀಡಲಾಗುತ್ತಿದ್ದು , ಸದರಿ ಯೋಜನೆಯ ಫಲಾನುಭವಿಗಳಿಗೆ ಇವತ್ತು ಮಾನ್ಯ ಪ್ರಧಾನ ಮಂತ್ರಿಗಳು ಬೀದಿ ಬದಿ ವ್ಯಾಪಾರಸ್ಥರ ಕುರಿತು ಆಡಿರುವ ಬೆಂಬಲ ನುಡಿಗಳನ್ನು ಒಳಗೊಂಡ ಅಭಿನಂದನ ಪತ್ರ ಹಾಗೂ ನಾಮ ಫಲಕವನ್ನು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ್ ರವರು ಫಲಾನುಭವಿಗಳಿಗೆ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಮಾನ್ಯ ಶ್ರೀ ರುದ್ರೇಶ್ ಗಾಳಿ ಹಾಗೂ ಉಪಯುಕ್ತರು ಆಡಳಿತ ಶ್ರೀಮತಿ ಭಾಗ್ಯಶ್ರೀ ಹುಗ್ಗಿ ಹಾಗೂ ಉಪಯುಕ್ತರು ಕಂದಾಯ ಶ್ರೀ ಪ್ರಶಾಂತ್ ಹನಗಂಡಿ ಹಾಗೂ ಪಾಲಿಕೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ಪ್ರಕಾಶ್ ಕುರಗುಂದ
Join The Telegram | Join The WhatsApp |