Join The Telegram | Join The WhatsApp |
ಬೆಳಗಾವಿ: ಜಿಲ್ಲೆಯ ಉಪ ನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳಗಾವಿ ಇವರ ವತಿಯಿಂದ ಜಿಲ್ಲಾ ಮಟ್ಟದ ಯುವ ಸಂಸತ ಸ್ಪರ್ಧೆಯನ್ನು ಶ್ರೀಮತಿ ಉಷಾ ತಾಯಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ ದಿನಾಂಕ 18-11-2022.
ರಂದು ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯ ಏಳು ತಾಲೂಕಿನಿಂದ ವಿವಿಧ ಶಾಲೆಗಳ ಯುವ ಸಂಸತ್ತು ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.
ಪ್ರಭಾರಿ ಉಪನಿರ್ದೇಶಕರಾದ ಸನ್ಮಾನ್ಯ ಬಸವರಾಜ ಮಿಲಾನಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುವ ಸಂಸತ್ ಸ್ಪರ್ಧೆಯ ನೋಡಲಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರಾದ ಶ್ರೀ ಎಸ್. ಕೆ. ಕಂಬಳಿ ಸರ್ ಅವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಂ.ಕೆ. ಮಾದರ್ ಸರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ವಿಷಯ ಪರೀಕ್ಷಕರಾದ ಶ್ರೀಮತಿ ಎಂ.ಎಂ ಪಾಟೀಲ್, ಶ್ರೀಮತಿ ಎಸ್ ಎಸ್ ನಾಗನೂರ ಮೇಡಂ. ಬೆಳಗಾವಿ ಗ್ರಾಮೀಣ BRP ಆದಂತಹ ಶಂಕರ ತಾರಾಪೂರ. ನಿರ್ಣಾಯಕರಾಗಿ ಆಗಮಿಸಿದಂತಹ ಶ್ರೀ ಸುಬ್ಬಾರಪೂರಮಠ, ಶ್ರೀಮತಿ ಕಡಬಿ, ಶ್ರೀಮತಿ ಪೋಳ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಎ.ಬಿ.ಕಡಬಿ ನಿರೂಪಣೆಯನ್ನು ಮಾಡಿದರು. ಶ್ರೀಮತಿ ಎಸ್ ಎಸ್ ನಾಗನೂರು ಮೇಡಂ ವಂದಿಸಿದರು..
ಮುಖ್ಯ ಅತಥಿಗಳಾಗಿ ಆಗಮಿಸಿ ಶ್ರೀ ಬಸವರಾಜ ಮಿಲಾನಟ್ಟಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು..
ಈ ಯುವ ಸಂಸತ್ ಸ್ಪರ್ಧೆಯನ್ನು ಆಯೋಜಿಸು ಉದ್ದೇಶ ಮಕ್ಕಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವುದರ ಜೊತೆಗೆ ಸರ್ಕಾರ ಮತ್ತು ಸಂಸದೀಯ ವ್ಯವಸ್ಥೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾಗಿದೆ..
ಇಂದಿನ ಮಕ್ಕಳೇ ಮುಂದಿನ ನಾಯಕರು ಎಂಬ ಉಕ್ತಿಯನ್ನು ಹೇಳಿ ತಾವೇ ಮುಂದಿನ ನಾಯಕರು ಎಂದು ಕರೆ ನೀಡಿದರು…
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |