ಸಿಹಿ ತಿಂದ ಬಳಿಕ ನೀರು ಕುಡಿಯುವುದು ಬಹುತೇಕ ನಮ್ಮೆಲ್ಲರ ಅಭ್ಯಾಸವಾಗಿದೆ. ಆದರೆ ಸಿಹಿ ತಿಂಡಿ ಸೇವಿಸಿದ ನಂತರ ನೀರು ಕುಡಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ? ತಜ್ಞರ ಪ್ರಕಾರ. ಸಿಹಿ ತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭವಿದೆ? ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ರಸಗುಲ್ಲಾ (Rasgulla), ಗುಲಾಬ್ ಜಾಮೂನ್ (Gulab Jamun), ಜಿಲೇಬಿ (Jalebi), ಮೈಸೂರು ಪಾಕ್ ( Mysore Pak) ಹೀಗೆ ಸ್ವೀಟ್ (sweet) ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಾಮಾನ್ಯವಾಗಿ ಖಾರ ತಿನ್ನುವುವವರಿಗಿಂತ ಸಿಹಿ ತಿನ್ನುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅದರಲ್ಲಿಯೂ ಪ್ರತಿನಿತ್ಯ ವಿವಿಧ ಬಗೆಯ ಸಿಹಿ ತಿನಿಸು (sweet) ಗಳನ್ನು ಇಷ್ಟ ಪಟ್ಟು ತಿನ್ನುವವರಿದ್ದಾರೆ. ಕೆಲವರಿಗೆ ಸ್ವೀಟ್ ತಿನ್ನುವುದರಿಂದ ಸಂತೋಷ ಹೆಚ್ಚುತ್ತದೆ. ದಿನವೂ ಸಿಹಿ ತಿಂಡಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವಿದ್ದರೂ ಸಿಹಿ ತಿನ್ನುವ ಅಭ್ಯಾಸ ಬಿಡುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಹಾಗಾಗಿ ಸ್ವೀಟ್ ಗಳನ್ನು ತಿನ್ನದಿರಲು ಸಾಧ್ಯವಾಗುವುದಿಲ್ಲ. ಆದರೆ ನಾವು ಇಷ್ಟ ಪಟ್ಟು ಸಿಹಿ ತಿಂದ ಬಳಿಕ ನಮಗೆ ಬಾಯಾರಿಕೆಯಾಗುತ್ತದೆ. ಈ ರೀತಿಯಾಗುವುದು ಸಹಜ. ಆ ವೇಳೆಯಲ್ಲಿ ನಮ್ಮಲ್ಲಿ ಹೆಚ್ಚಿನವರು ನೀರನ್ನು ಕುಡಿಯುತ್ತಾರೆ. ಆದರೆ ಕೆಲವರು ಆ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ ಎನ್ನತ್ತಾರೆ. ಹಾಗಾದರೆ ಸಿಹಿ ತಿಂದ ಬಳಿಕ ನೀರು (Water) ಕುಡಿಯುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ ತಿಳಿದುಕೊಳ್ಳಿ.
ಸಿಹಿ ತಿಂದ ಬಳಿಕ ನೀರು ಕುಡಿಯುವುದು ಬಹುತೇಕ ನಮ್ಮೆಲ್ಲರ ಅಭ್ಯಾಸವಾಗಿದೆ. ಆದರೆ ಸಿಹಿ ತಿಂಡಿ ಸೇವಿಸಿದ ನಂತರ ನೀರು ಕುಡಿದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ? ತಜ್ಞರ ಪ್ರಕಾರ. ಸಿಹಿತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಹಾಗಾದರೆ ಇದರಿಂದ ಯಾವ ರೀತಿಯ ಲಾಭವಿದೆ? ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಳವಾಗುವುದನ್ನು ತಡೆಯುತ್ತದೆ:
ಸಿಹಿ ತಿಂಡಿಗಳನ್ನು ತ್ವರಿತವಾಗಿ ತಿನ್ನುವುದು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ದೇಹದಲ್ಲಿ ಸಕ್ಕರೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆ ಮಧುಮೇಹದಂತಹ ಸಕ್ಕರೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ. ಆದ್ದರಿಂದ ಸಿಹಿ ತಿಂಡಿಗಳನ್ನು ಸೇವಿಸಿದ ನಂತರ ನೀರು ಕುಡಿಯುವುದರಿಂದ ಈ ಸಕ್ಕರೆ ಸ್ಪೈಕ್ ಸಮಸ್ಯೆಯನ್ನು ತಡೆಯಬಹುದು ಎಂದು ಹೇಳಲಾಗುತ್ತದೆ.