Join The Telegram | Join The WhatsApp |
ಬಾಗಲಕೋಟೆ : MLA ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಎನ್ನುವರಿಗೆ ಕೋಟ್ಯಂತರ ರೂಪಾಯಿ ಪಡೆದುಕೊಂಡು ಚೈತ್ರಾ ಕುಂದಾಪುರ ಸೇರಿದಂತೆ ಆಕೆಯ ಗ್ಯಾಂಗ್ ವಂಚನೆ ಮಾಡಿದೆ.
ಉದ್ಯಮಿಯಿಂದ ಕಿತ್ತುಕೊಂಡ ಕೋಟ್ಯಾಂತರ ರೂಪಾಯಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೈಫೈ ಜೀವನ ಆರಂಭಿಸಿದ್ದಾರೆ.
ಅಲ್ಲದೇ ಅದೇ ದುಡ್ಡಿನಲ್ಲಿ ಚೈತ್ರಾ ಕಿಯಾ ಕಂಪನಿಯ ಕಾರು ಖರೀದಿಸಿದ್ದು, ಇದೀಗ ಆ ಕಾರು ಬಾಗಲಕೋಟೆಯಲ್ಲಿ ಪತ್ತೆಯಾಗಿದೆ.
ಉದ್ಯಮಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ 5 ಕೋಟಿ ಹಣ ಪಡೆದು ವಂಚನೆ ಕೇಸ್ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಕಾರು ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಪತ್ತೆಯಾಗಿದೆ.
ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳ ಮನೆಯಲ್ಲಿ ಚೈತ್ರಾ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದೆ.ಚೈತ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್ನ ಕಿಯಾ ಕಾರನ್ನು ಕಿರಣ್, ಸೆಪ್ಟೆಂಬರ್ 9ರಂದು ತಂದು ತನ್ನ ಬಳಿ ಇಟ್ಟುಕೊಂಡಿದ್ದ.
ಮುಧೋಳದಲ್ಲಿ ಡ್ರೈವಿಂಗ್ ಸ್ಕೂಲ್ ಹೊಂದಿರುವ ಕಿರಣ್ ಗಣಪ್ಪಗೋಳ, ಈ ಹಿಂದೆ ಮುಧೋಳ ಕಾರ್ಯಕ್ರಮಕ್ಕೆ ಬಂದಿದ್ದ ಚೈತ್ರಾ ಕುಂದಾಪುರ ಪರಿಚಯವಾಗಿತ್ತು.ಸದ್ಯ ಸಿಸಿಬಿ ಪೊಲೀಸರು ಚೈದ್ರಾ ಕುಂದಾಪುರಗೆ ಸೇರಿದ KA 20 ME 7253 ನಂಬರ್ನ ಕಿಯಾ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈದ್ರಾ ಕುಂದಾಪುರಗೆ ಸೇರಿದ ಕಾರು ತಂದು ಇಟ್ಟುಕೊಂಡಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಕಿರಣ್ ಗಣಪ್ಪಗೋಳನನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಡೀಲ್ ಪ್ರಕರಣ ಹೊರಬಿದ್ದ ವೇಳೆ ಚೈತ್ರಾ ಪಿಎ ಶ್ರೀಕಾಂತ್, ಕಿರಣ್ಗೆ ಕರೆ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಒಂದು ಬಾರ್ ಆಯಂಡ್ ರೆಸ್ಟೊರೆಂಟ್ ಮುಂದೆ ಇದೆ. ಅದನ್ನು ತಂದು ನಿಮ್ಮಬಳಿ ಇಟ್ಕೊಳ್ಳಿ ಎಂದು ಹೇಳಿದ್ದ. ಅದರಂತೆ ಕಿರಣ್, ಸೆಪ್ಟೆಂಬರ್ 9ರಂದು ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರೆನ್ಸ್ ತಂದಿದ್ದ.
ಬಳಿಕ ಸಿಸಿಬಿ ಪೊಲೀಸರು ಚೈತ್ರಾ, ಪಿಎ ಶ್ರೀಕಾಂತ್, ಶ್ರೀಕಾಂತ್ ನಿಂದ ಕಿರಣ್ಗೆ ಕರೆ ಟ್ರೈಸೌಟ್ ಮಾಡಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Join The Telegram | Join The WhatsApp |