ಇಂಡಿ:-ಗ್ಯಾರಂಟಿಯಿಂದ ಯಾವುದೇ ಕಾಮಗಾರಿಗಳು ಕುಂಟಿತಗೊಂಡಿಲ್ಲ ಸರಕಾರಕ್ಕೆ ಅಪಪ್ರಚಾರ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿ ನಡೆಯುತ್ತವೆ. ಇಂಡಿ ತಾಲೂಕಿನ ರಸ್ತೆಗಳು ನಾಲ್ಕೈದು ದಿನಗಳಲ್ಲಿ ಪ್ರಾರಂಭಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಡಾ.ಬಿ.ಆರ್ ಅಂಬೇಡ್ಕರವರ ಪ್ರತಿಮೆ ಮಾಡಿದರೆ ಸಾಲದು ಅವರ ಸಾಮಾಜಿಕ ಕಳಕಳಿ ಹಾಗೂ ದೀನ ದುರ್ಬಲರ ಬಡವರ ಬಗ್ಗೆ ಇದ್ದ ಪ್ರೀತಿ ನಿಮ್ಮಲ್ಲಿಯೂ ಸದಾ ಇರಬೇಕು. ನಮಗೆಲ್ಲಾ ವೇದಿಕೆ ಮೇಲೆ ಕೂಡಲು ರಾಜಕೀಯ ಶಕ್ತಿ ನೀಡಿದವರು ಡಾ,ಬಿ,ಆರ್ ಅಂಬೇಡ್ಕವರಿಂದ ಮಾತ್ರ ಸಾಧ್ಯವಾಗಿದೆ ಅವರ ತ್ಯಾಗ ಬಲಿಧಾನ ಸದಾ ಸ್ಮರಿಸಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆ ಅನಾವರಣ ಹಾಗೂ ಮೆಟ್ರಿಕ ನಂತರ ಬಾಲಕರ ವಸತಿ ನಿಲಯ (ಪ.ಜಾ) ಇಂಡಿ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟಿನೆ ನೇರವೇರಿಸಿ ಮಾತನಾಡಿದರು.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹಾದೇವಪ್ಪ,ಮಾತನಾಡಿ,ಯಶವಂತರಾಯಗೌಡ ಪಾಟೀಲ ಅಪರೂಪದ ಸರಳ, ಸಜ್ಜನ ರಾಜಕಾರಣಿ . ಬಡವರಿಗೆ ದೀನದುರ್ಬಲರಿಗೆ ಶಕ್ತಿ ಬಂದಿದ್ದು ಯಶವಂತಗೌಡರಿಂದ.
ಹೋರಾಟ ಮಾಡಿ , ಸದಾ ನಾವು ಜೀವನ ಉಸಿರು ಇರುವವೆಗೂ ನಿಮ್ಮಂತ ರಾಜಕಾರಣಿಗಳ ಜೊತೆ ಇರುವುದಾಗಿ ಹೇಳಿದ ಅವರು ಶಾಸಕ ಯಶವಂತರಾಯಗೌಡ ಪಾಟೀಲ ನಮ್ಮ ಬಳಿ ಕ್ಷೇತ್ರದ ಕೆಲಸಕ್ಕಾಗಿ ಬಂದಿದ್ದಾರೆ ವಿನಹ: ಯಾವುದೇ ಅಧಿಕಾರದ ಆಶೆಯಿಂದ ಅಲ್ಲ. ನಿಮ್ಮ ಅಭಿವೃದ್ದಿ ಶಕ್ತಿ ತುಂಬವ ಕೆಲಸ ಸದಾ ಯಶವಂತರಾಯಗೌಡ ಮಾಡುವುದಾಗಿ ಹೇಳಿದರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಇಂಡಿ ತಾಲೂಕು ಭೀಕರ ಬರಗಾಲಕ್ಕೆ ತುತ್ತಾಗಿರುವ ಭಾಗ ಆಲಿಮಟ್ಟಿ ಯೋಜನೆಯ ಮೂಲಕ ನೀರು ಹರಿಸಿದಾಗ ಮಾತ್ರ ಈ ಭಾಗ ಸಂಪೂರ್ಣ ನೀರಾವರಿಯಾಗಿ ರೈತರ ಬದುಕು ಹಸನಾಗುತ್ತದೆ.ಬರಗಾಲದಿಂದ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ .
ಕರ್ನಾಟಕ ಸರಕಾರದ ಇಬ್ಬರು ಹಿರಿಯ ಮುತ್ಸದಿ ರಾಜಕಾರಣಿಗಳು ಹಾಗೂ ಡಾ.ಬಿ.ಆರ್ ಅಂಬೇಡ್ಕರವರ ಸಮಸಮಾಜದ ಕನಸು ಹೊತ್ತ ಸಚಿವರುಗಳು ನನ್ನ ತಾಲೂಕಿಗೆ ಬರಮಾಡಿಕೊಂಡಿರುವುದು ಈ ಭಾಗದ ಜ್ವಲಂತ ಸಮಸ್ಯಗಳು ಅರಿತು ನಿಮ್ಮಿಂದ ಕಿಂಚ್ಚಿತ್ತಾದರೂ ಸಹಾಯ ಸಹಕಾರ ಆಗಲಿ ಎಂಬ ಉದ್ದೇಶ, ಭೀಕರ ಬರಗಾಲ ಸಂಭವಿಸಿದ್ದು ರಾಜ್ಯ ಸರಕಾರ ಜಾನುವಾರಗಳಿಗೆ ಮೇವು ನೀರಿನ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದೆ ಎಂದರು ಬಂತೆ ಸಂಘಪಾಲದಿವ್ಯಸಾನಿಧ್ಯವಹಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೋ ರಾಜು ಆಲಗೂರ, ಜಿ.ಪಂ ಕಾರ್ಯನಿವಾಃಕ ಅಧಿಕಾರಿ ರಾಹುಲ್ ಸಿಂಧೆ, ಉಪವಿಭಾಗ ದಂಡಾಧಿಕಾರಿ ಹಬೀದ ಗದ್ಯಾಳ, ಉಪನಿರ್ದೇಶಕ ಸಮಾಜ ಕಲ್ಯಾಣ ಅಧಿಕಾರಿ ಪುಂಡಲೀಕ ಮಾನವರ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ, ಸಮಾಜ ಸೇವಕಿ ಅಕ್ಷತಾ .ಕೆ.ಸಿ, ಬಿ.ಎಂ ಕೋರಿ, ಎಂ.ಆರ್ ಪಾಟೀಲ, ಶ್ರೀಮಂತ ಇಂಡಿ, ಮಹಾದೇವ ಪೂಜಾರಿ, ಭೀಮಾಶಂಕರ ಬಿರಾದಾರ, ಸುರೇಶಗೌಡ ಪಾಟೀಲ,ಚಂದ್ರಶೇಖರ ಕೊಡಬಾಗಿ, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜನ ಬಿರಾದಾರ,ಸುರೇಶ ಸುಂಟ್ಯಾಳ, ಅಣ್ಣಸಾಹೇಬ ಪಾಟೀಲ, ಸುರೇಶ ಗೋಣಸಗಿ, ಸುನೀಲ ಬಿರಾದಾರ, ಸಾಂಬಾಜಿ ಮಿಸಾಳೆ, ಗಣಪತಿ ಬಾಣೀಕೋಲ, ಅಶೋಕ ಚಕ್ರವರ್ತಿ, ಕಾಂತಾ ನಾಯಕ, ಜಟ್ಟೆಪ್ಪ ರವಳಿ, ಜಾವೀದ ಮೂಮಿನ್ ಮತ್ತಿತರಿದ್ದರು.
ಪ್ರಶಾಂತ ಕಾಳೆ, ಧರ್ಮರಾಜ ವಾಲೀಕಾರ, ಶೇಖರ ಶಿವಶರಣ, ಶೇಖರ ನಾಯಕ, ಶಾಂತು ಶಹಾಪೂರ, ಗಂಗಾಧರ ನಾಟೀಕಾರ ,ಹಣಮಂತ ಅರವತ್ತು, ಮಹೇಶ ಸೊಲಂಕಲ, ಎಸ್.ಎಸ್ ಮಾಢ್ಯಾಳ, ಸೋಮಶೇಖರ ಮ್ಯಾಕೇರಿ, ಸತೀಶಗೌಡ ಪಾಟೀಲ , ಅವಿನಾಶ ಬಗಲಿ,ನಾಗೇಂದ್ರ ಮೇತ್ರಿ , ಮಹೇಶ ಹೊನ್ನಬಿಂದಗಿ, ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾದರು.ಮಾಜಿ ತಾ.ಪಂ ಸದಸ್ಯ ಗಣಪತಿ ಬಾಣಿಕೋಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಪೋಟೋಕ್ಯಾಪ್ಸನ್ ೩೦ ಇಂಡಿ೦೨: ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ವಿಶ್ವರತ್ನ ಡಾ.ಬಾಬಾಸಾಹೇಬ ಅಂಬೇಡ್ಕರವರ ಪ್ರತಿಮೆ ಅನಾವರಣ ಹಾಗೂ ಮೆಟ್ರಿಕ ನಂತರ ಬಾಲಕರ ವಸತಿ ನಿಲಯ (ಪ.ಜಾ) ಇಂಡಿ ನೂತನ ಕಟ್ಟಡ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಉದ್ಘಾಟಿನೆ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ ,ಶಾಸಕ ಯಶವಂತರಾಯಗೌಡ ಪಾಟೀಲ ವೇದಿಕೆ ಗಣ್ಯರು ವಿವಿಧ ಕಾಮಗಾರಿಗಳು ಉದ್ಘಾಟಿಸುತ್ತಿರುವುದು.
ಇಂಡಿ: ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಅವರು ಸಮರ್ಥವಾಗಿ ಸರ್ಕಾರವನ್ನು ನಡೆಸುತ್ತಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಕೆಲಸಕ್ಕೆ ಬಾರದವರ ಹೇಳಿಕೆಗೆ ಆದ್ಯತೆ ನೀಡಬೇಕಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಣಗಳ ಮಧ್ಯೆ ವಾಕ್ಸಮರ ಏರ್ಪಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಮಹದೇವಪ್ಪ, ನಮ್ಮ ಪಕ್ಷದಲ್ಲಿ ಯಾವ ಬಣಗಳೂ ಇಲ್ಲ, ಇರುವುದೊಂದೇ ಕಾಂಗ್ರೆಸ್ ಬಣ. ಮುಖ್ಯಮಂತ್ರಿ ಬದಲಾವಣೆ ಎಂದೆಲ್ಲ ಕೆಲಸಕ್ಕೆ ಬಾರದವರು ಚರ್ಚೆ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ ಬಣದ ಹೇಳಿಕೆಗೆ ತಿರುಗೇಟು ನೀಡಿದರು.
ವರದಿ.ತುಕಾರಾಮ ಪವಾರ