Join The Telegram | Join The WhatsApp |
ಮೊಳಕಾಲ್ಮೂರು:ಭಾರತೀಯ ಜನತಾ ಪಾರ್ಟಿ, ಮೊಳಕಾಲ್ಮೂರು ಮಂಡಲದ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಡಾ ಪಿ ಎಂ ಮಂಜುನಾಥ್ ರವರು ಮಾತನಾಡಿ
ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರೇ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಹೇಳಿದ್ದಾರೆ ಅದನ್ನು ಹೊರತುಪಡಿಸಿ ಪಕ್ಷದ ವತಿಯಿಂದ ಇಲ್ಲಿ ಯಾರೇ ಅಭ್ಯರ್ಥಿಯಾಗಲಿ, ಬಿಜೆಪಿಯನ್ನು ಗೆಲ್ಲಿಸುವ ಕೆಲಸ ಮಾಡಬೇಕು ಯಾರು ಕೂಡ ಅನ್ಯ ಕಾರಣಗಳನ್ನು ಹೇಳುತ್ತಾ ಕಾಲ ಹರಣ ಮಾಡದೆ ಬೂತ್ ಮಟ್ಟದಿಂದ ಬಿಜೆಪಿ ಪಕ್ಷವನ್ನು ಬಲಪಡಿಸಬೇಕು ಎಂದರು ಅದೇ ರೀತಿ ನರೇಂದ್ರ ಮೋದಿಜಿ ಅವರು ಭಾರತ ದೇಶವನ್ನು ಉನ್ನತ ಮಟ್ಟಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಈಗ ಎಲ್ಲಾ ದೇಶಗಳು ಕೂಡ ಭಾರತದ ಕಡೆ ಮುಖ ಮಾಡಿವೆ ಆದ್ದರಿಂದ ನಾವು ಅವರಿಗೆ ಕೈ ಬಲಪಡಿಸಬೇಕು ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ , ಜಿಲ್ಲಾ ಉಪಾಧ್ಯಕ್ಷರಾದ ರಾಮದಾಸ್, ಜಿಂಕಲ್ ಬಸವರಾಜ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಟಿಟಿ ರವಿಕುಮಾರ್, ಉಪಾಧ್ಯಕ್ಷರಾದ ಎನ್ ಮಂಜಣ್ಣ, ಸದಸ್ಯರುಗಳಾದ ರೂಪ ವಿನಯ್ ಕುಮಾರ್, ಜಿಲ್ಲಾ ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಸೂರ್ಯಮನಹಳ್ಳಿ ನಾಗರಾಜ್, ಪರಮೇಶಪ್ಪ ಎಂ ಪಿ ಪ್ರಭಾಕರ ಮತ್ತು ಕಾರ್ಯಕರ್ತರು ಇನ್ನು ಮುಂತಾದವರು ಉಪಸ್ಥಿತರಿದ್ದರು..
ವರದಿ ಪಿಎಂ ಗಂಗಾಧರ್
Join The Telegram | Join The WhatsApp |