This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಸಮಾಜಸೇವೆಗೆ ಮತ್ತೊಂದು ಹೆಸರೇ ಡಾ ರವಿ ಪಾಟೀಲ.. ಬಸವರಾಜ ರೊಟ್ಟಿ ಹೇಳಿಕೆ….

Join The Telegram Join The WhatsApp

ಬೆಳಗಾವಿ : ರವಿವಾರ ನಗರದ ಕೆಪಿಟಿಸಿಎಲ್ ಹಾಲ್ ನಲ್ಲಿ ನಡೆದಂತೆ, ಯೋಗಕ್ಷೇಮ ಎಂಬ ವೃದ್ಧರ ಪುನರ್ಧಾಮದ ಉದ್ಘಾಟನಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಧನ್ಯತೆಯ ಭಾವದಿಂದ ಮೂಡಿಬಂದಿದೆ..

ಬೆಳಗಾವಿ ನಗರದ ಪ್ರಸಿದ್ದ ವೈದ್ಯರು ಹಾಗೂ ಸಮಾಜಮುಖಿ ಕೆಲಸ ಮಾಡುತ್ತಿರುವ ಡಾ ರವಿ ಪಾಟೀಲ ಅವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಹೋಣಗಾ ಎಂಬಲ್ಲಿ, ವಿಜಯ ಮೆಡಿಕಲ್ ಕೇರ್ ಸೆಂಟರ್ ಅಡಿಯಲ್ಲಿ ಈ ಯೋಗಕ್ಷೇಮ ಎಂಬ ವೃದ್ಧರ ಪುನರ್ಧಾಮ ತನ್ನ ಸೇವೆಯನ್ನು ಪ್ರಾರಂಭಿಸಿದೆ..

ರವಿವಾರ ಬೆಳಿಗ್ಗೆ ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅಗಾಧ ಸೇವೆ ಮಾಡಿದ ಅರವಿಂದ ದೇಶಪಾಂಡೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಈ ಯೋಗಕ್ಷೇಮ ಎಂಬ ಕೇಂದ್ರದ ಉದ್ಘಾಟನೆ ನೆರವೇರಿತು..

ವೇದಿಕೆ ಮೇಲೆ ಮಾತನಾಡಿದ ನ್ಯಾಯವಾದಿ ಹಾಗೂ ಸಾಮಾಜಿಕ ಚಿಂತಕ ಬಸವರಾಜ ರೊಟ್ಟಿ ಅವರು ಡಾ ರವಿ ಪಾಟೀಲ ಅವರು ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು,

ಇನ್ನೂ ಉದ್ಘಾಟನೆ ಮಾಡಿ ಮಾತನಾಡಿದ ಅರವಿಂದ ದೇಶಪಾಂಡೆ ಅವರು, ವೈದ್ಯಕೀಯ ಕ್ಷೇತ್ರ ವ್ಯಾಪಾರಿ ಕ್ಷೇತ್ರ ಆಗಿರುವಾಗ, ರವಿ ಪಾಟೀಲ್ ಅಂತವರು ಇಂದು ಮಾನವೀಯ ಮೌಲ್ಯ ಇಟ್ಟುಕೊಂಡು ಈ ರೀತಿ ಉಚಿತ ಹಾಗೂ ರಿಯಾಯತಿ ದರದಲ್ಲಿ ಸಮಾಜಕ್ಕೆ ವೈದ್ಯಕೀಯ ಸೇವೆ ನೀಡುತ್ತಿರುವುದು ಎಲ್ಲರಿಗೂ ಮಾದರಿ ಎಂದರು..

ಇನ್ನು ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ ಬೇರೆ ಹಲವಾರು ಕಾರ್ಯಕ್ರಮಗಳ ಆಹ್ವಾನ ಇದ್ದರೂ ಅದನ್ನೆಲ್ಲ ಬಿಟ್ಟು ನಾನು ಇಲ್ಲಿ ಬಂದಿದ್ದು, ರವಿ ಪಾಟೀಲ ಅವರ ಸಮಾಜ ಕಾಳಜಿಯ ಕೆಲಸ ಎಂದರು, ಇನ್ನೂ ಮುಂದಿನ ದಿನಗಳಲ್ಲಿ ಅವರಿಗೆ ಹೆಚ್ಚಿನ ಶಕ್ತಿ ದೊರಕಿ, ಇನ್ನೂ ಅನೇಕ ಸಮಾಜಮುಖಿ ಕಾರ್ಯದಲ್ಲಿ ತೊಡಗಲಿ ಎಂದು ಆಶಿಸಿದರು..

ಇದೆ ಸಮಯದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ನೀಡಿದಂತಹ ಮಾಜಿ ಸೈನಿಕರ ಸಂಘಕ್ಕೆ ಆರೋಗ್ಯ ವೈದ್ಯಕೀಯ ಸೇವೆಯ ಕಾರ್ಡ ವಿತರಿಸಲಾಯಿತು..

ಇನ್ನು ನಮ್ಮ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಡಾ ರವಿ ಪಾಟೀಲ ಅವರು ತಮ್ಮ ಯೋಗಕ್ಷೇಮ ಕೇಂದ್ರದ ಬಗ್ಗೆ ಮಾತನಾಡುತ್ತಾ ಮುಂದಿನ ಸಮಾಜಸೇವೆಯ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು…

ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ಸಾಧಕರಾದ ಅರವಿಂದ ದೇಶಪಾಂಡೆ, ಲಕ್ಷ್ಮಣ ಸವದಿ, ಬಸವರಾಜ್ ರೊಟ್ಟಿ, ಕೇಂದ್ರಬಿಂದು ಡಾ ರವಿ ಪಾಟೀಲ, ಮಾಜಿ ಸೈನಿಕ ಸಂಘದ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ, ಆಯೋಜಕರಾದ ಸೋಮಶೇಖರ, ವೈದ್ಯಕೀಯ ಸಿಬ್ಬಂದಿ, ವಿಧ್ಯಾರ್ಥಿಗಳು, ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ


Join The Telegram Join The WhatsApp
Bharath Vaibhav
the authorBharath Vaibhav

Leave a Reply