Join The Telegram | Join The WhatsApp |
ಚಿಟಗುಪ್ಪಾ: ನಾಳೆ ಜನವರಿ 28ಮತ್ತು29ರಂದು ಎರಡು ದಿನಗಳವರೆಗೆ ನಡೆಯವ ಬಸವ ಧರ್ಮ ಸಮಾವೇಶ ಹಾಗೂ ಚಿಟಗುಪ್ಪಾ ತಾಲೂಕು ಪ್ರಥಮ ಶರಣ ಸಾಹಿತ್ಯ ಸಮ್ಮೇಳವನ್ನು ಯಶಸ್ವಿಗೊಳಿಸಿ ಎಂದು ಸ್ವಾಗತ ಸಮಿತಿ ಅಧ್ಯಕ್ಷರ ಹಾಗು Ksiidc ಅಧ್ಯಕ್ಷ ಡಾ.ಶೈಲೆಂದ್ರ ಬೆಲ್ದಾಳೆ ಪತ್ರಿಕಾಘೋಷ್ಠಿ ಮುಖಾಂತರ ಕರೆಯನ್ನು ನೀಡಿದ್ದಾರೆ.ಚಿಟಗುಪ್ಪಾ ತಾಲೂಕಿನ ಮನ್ನಾಖೇಳಿ ಗ್ರಾಮದ ಶ್ರೀ ಬಸವ ಮಹಾಮಠದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಬೆಲ್ದಾಳೆ,ಚಿಟಗುಪ್ಪಾ ಆದ ಬಳಿಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಶರಣ ಭಕ್ತಾದಿಗಳಿಗೆ ಸಾಹಿತ್ಯ, ವಚನ ಸ್ಮರಣೆ ಮಾಡಲು ಒಂದ್ ಒಳ್ಳೆ ಅವಕಾಶವಾಗಿದೆ,ಈ ಭಾಗದಲ್ಲದೆ ಬೇರೆ ಜಿಲ್ಲೆಯ ಪೂಜ್ಯರುಗಳು ಭಾಗಿಯಾಗಲಿದ್ದಾರೆ, ಆದುದರಿಂದ ಸಹಸ್ರಾರು ಭಕ್ತಾದಿಗಳು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಹೇಳಿದರು.ಬಳಿಕ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿಯ ಅಪ್ಪಾಜಿ ಮಾತಾಡಿದ್ದು,ಸಮ್ಮೇಳನದಲ್ಲಿ ಶರಣರ ಸ್ತಬ್ದಚಿತ್ರ ಮತ್ತು ಕಾರ್ಯಕ್ರಮದ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ ಮತ್ತು ಧ್ವಜಾರೋಹಣ, ಶರಣ ಸಂಸ್ಕೃತಿ, ವಚನ ಸಾಹಿತ್ಯ ಸೇರಿ ಅನೇಕ ಕಾರ್ಯಕ್ರಮ ಜರುಗಲಿವೆ,ಅಲ್ಲದೆ ಕಾರ್ಯಕ್ರಮದಲ್ಲಿ ಕ್ಷೇತ್ರದ ರಾಜಕೀಯ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ,ಆದುದರಿಂದ ಶರಣ ಭಕ್ತಾದಿಗಳು ಹೆಚ್ಚೇಚ್ಚು ಸಂಖ್ಯೆಯಲ್ಲಿ ಬಂದು ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಮಾಡಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಸರ್ವಾಧ್ಯಕ್ಷರಾದ ಪೂಜ್ಯ ಮಾತೆ ಮೈತ್ರಾದೇವಿ ತಾಯಿ,ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ನಾಗರಾಜ್ ಎಸ್. ಸೇರಿಕಾರ್,ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಂಗಮೇಶ ಜವಾದಿ ಸೇರಿ ಅನೇಕ ಶರಣರು ಉಪಸ್ಥಿತರಿದ್ದರು.
ವರದಿ:ಸಜೀಶ ಲಂಬುನೋರ್
Join The Telegram | Join The WhatsApp |