ಜೈಪುರ: ಕ್ರಿಕೆಟ್ ಆಡುವಾಗ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಿಗೆ ಕೋಚಿಂಗ್ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಬೆಂಗಳೂರಿನಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯದ ಸಮಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡಿದ್ದರು. ಬೆಂಗಳೂರಿನ ಎಸ್‌ಎಲ್‌ಎಸ್ ಕ್ರೀಡಾಂಗನ ಕ್ರಿಕೆಟ್ ಮೈದಾನದಲ್ಲಿ ಯಂಗ್ ಲಯನ್ಸ್ ಕ್ಲಬ್ ವಿರುದ್ಧದ 50 ಓವರ್‌ಗಳ ಪಂದ್ಯದಲ್ಲಿ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ವಿಜಯ ಕ್ರಿಕೆಟ್ ಕ್ಲಬ್ (ಮಾಲೂರು) ಅನ್ನು ಪ್ರತಿನಿಧಿಸಿದ್ದರು. ಅಲ್ಲಿ ದ್ರಾವಿಡ್ 6ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ಎಂಟು ಎಸೆತಗಳಲ್ಲಿ 10 ರನ್ ಗಳಿಸಿದರು. ತಂದೆ-ಮಗ ಜೋಡಿ ಐದನೇ ವಿಕೆಟ್‌ಗೆ 17 ರನ್‌ಗಳ ಸಂಕ್ಷಿಪ್ತ ಜೊತೆಯಾಟವಾಡಿತು.
ಆದರೆ ಅದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಗಾಯಗೊಂಡರು. ಅವರ ಕಾಲಿಗೆ ಗಂಭೀರ ಪೆಟ್ಟಾಗಿದ್ದು, ಕಾಲಿಗೆ ದೊಡ್ಡ ಮಟ್ಟದಲ್ಲೇ ಬ್ಯಾಂಡೇಜ್ ಕಟ್ಟಲಾಗಿತ್ತು. ಇದು ಅವರು ಮತ್ತೆ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಹೇಳಲಾಗಿತ್ತು. ಇದೇ ವಿಚಾರ ಅವರು ಕೋಚಿಂಗ್ ಮಾಡುತ್ತಿರುವ ರಾಜಸ್ತಾನ ರಾಯಲ್ಸ್ ತಂಡದ ಆತಂಕಕ್ಕೂ ಕಾರಣವಾಗಿತ್ತು.
ಕೋಚಿಂಗ್ ಗೆ ಬಂದು ಅಚ್ಚರಿ ಮೂಡಿಸಿದ ಜಾಮಿ
ಇನ್ನು ದ್ರಾವಿಡ್ ಗುಣಮುಖರಾಗುವುದಿಲ್ಲ. ಹೀಗಾಗಿ ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅವರ ಸಲಹೆ ತರಬೇತಿ ಸಿಗುವುದಿಲ್ಲ ಎಂದು ರಾಜಸ್ತಾನ ರಾಯಲ್ಸ್ ತಂಡ ಭಾವಿಸಿತ್ತು. ಆದರೆ ಅಚ್ಚರಿ ಎಂಬಂತೆ ಇದೀಗ ರಾಹುಲ್ ದ್ರಾವಿಡ್ ಮೈದಾನಕ್ಕೆ ಆಗಮಿಸಿದ್ದಾರೆ. ಅಂದು ಎದ್ದು ನಿಲ್ಲಲೂ ಸಾಧ್ಯವಾಗದೇ ಅವರು ಕ್ರಚಸ್ ಅವಲಂಬಿಸಿದ್ದ ದ್ರಾವಿಡ್ ಇಂದು ಅದೇ ಕ್ರಚಸ್ ನೆರವಿನಿಂದ ಮೈದಾನಕ್ಕೆ ಬಂದಿದ್ದಾರೆ.
ಮಾತ್ರವಲ್ಲದೇ ಕಾಲಿನ ಗಾಯದ ಹೊರತಾಗಿಯೂ ತಂಡದ ತರಬೇತಿ ಅವಧಿಯಲ್ಲಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡು ಆಟಗಾರರಿಗೆ ತರಬೇತಿ ಕೂಡ ನೀಡಿದ್ದಾರೆ. ಪ್ರಸ್ತುತ ಸರಿಯಾಗಿ ನಡೆಯಲು ಸಾಧ್ಯವಾಗದ ದ್ರಾವಿಡ್, ಗಾಲ್ಫ್ ಕಾರ್ಟ್‌ನಲ್ಲಿ ಮೈದಾನಕ್ಕೆ ಆಗಮಿಸಿದ್ದು, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಮಾರ್ಗದರ್ಶನ ನೀಡುತ್ತಾ ಕ್ರಚಸ್ ಸಹಾಯದಿಂದ ನಿಂತಿದ್ದರು.
ಈ ವಿಡಿಯೋವನ್ನು ರಾಜಸ್ತಾನ ರಾಯಲ್ಸ್ ತಂಡ ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ, ‘ದಂತಕಥೆ ಭಾರತದ ಮಾಜಿ ಕೋಚ್ 10 ವರ್ಷಗಳ ನಂತರ ಆರ್‌ಆರ್‌ಗೆ ಮರಳುತ್ತಿದ್ದಾರೆ. ಈ ಹಿಂದೆ ನಾಯಕ ಮತ್ತು ಮಾರ್ಗದರ್ಶಕರಾಗಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೀಗ ಕೋಚ್ ಆಗಿ ಮತ್ತೆ ತಂಡ ಸೇರ್ಪಡೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.