ಐಗಳಿ: -ಅಥಣಿ ತಾಲೂಕಿನ ಐಗಳಿ ಗ್ರಾಮದ ಕನಕದಾಸ ಸರ್ಕಲ್ ( ಮಗ್ಗ) ದಲ್ಲಿ ಗ್ರಾಮ ಪಂಚಾಯತಿಯ ಅನುದಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಶುದ್ದ ಕುಡಿಯುವ ನೀರಿನ ಘಟಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಪಾಟೀಲ ಅವರ ಚಾಲನೆ ನೀಡಿದರು.
ನಂತರ ಮತನಾಡಿ ಗ್ರಾಮದ ಪ್ರತಿಯೊಬ್ಬರಿಗು ಶುದ್ದವಾದ ಆರೋಗ್ಯಕರವಾದ ನೀರು ಸಿಗಬೇಕು ಪಂಚಾಯತಿ ವತಿಯಿಂದ ಈ ಘಟಕವನ್ನು ನಿರ್ಮಾಣ ಮಾಡಲಾಗಿದೆ ಈ ಘಟಕವನ್ನು ಎಲ್ಲರೂ ಸದುಪಯೋಗ ಪಡದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಿ ಎಸ್ ನೇಮಗೌಡ ಅಪ್ಪು ಮೆಡಿಕಲ್ ಅಪ್ಪಸಾಬ ತೆಲಸಂಗ ಬಸವರಾಜ ಬಿರಾದಾರ ಅಪ್ಪು ಮಾಳಿ ಯಲ್ಲಪ್ಪ ಮಿರ್ಜಿ ಅಣ್ಣಾರಾಯ ಹಾಲಳ್ಳಿ ಗ್ರಾಮ ಪಂ ಸದಸ್ಯರಾದ ಬಸಗೌಡ ಬಿರಾದರ ಅಂಬಣ್ಣ ಬಿರಾದಾರ ಶ್ರೀಸೈಲ ಮಿರ್ಜಿ ರವಿ ಹಾಲಳ್ಳಿ ಸುರೇಶ ಬಿಜ್ಜರಗಿ ಮನೋಹರ ಝುಜರವಾಡ ಮತ್ತು ರಾಜಕುಮಾರ ದಳವಾಯಿ ದೇವೇಂದ್ರ ಬೆಳಗಲಿ ರಮೇಶ ಹುಣಸಿಕಟ್ಟಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಠಕ್ ಕಾರ್ಯದರ್ಶಿ ಗಿರೇಶ ಅವಟಿ ಕ್ಲಾರ್ಕ್ ಅಪ್ಪು ಮದಭಾವಿ ಸೇರಿದಂತೆ ಸಿಬ್ಬಂದಿಗಳು ಇತರರು ಉಪಸ್ಥಿತಿ ಇದ್ದರು.
ವರದಿ :-ಆಕಾಶ ಎಮ್