ಬೈಲಹೊಂಗಲ : ಪಟ್ಟಣದಲ್ಲಿ ವಿಶ್ವಹಿಂದೂಪರಿಷದ್ ಬಜರಂಗದಳ ವತಿಯಿಂದ ದುರ್ಗಾಮಾತಾ ದೌಡ್ ಶ್ರೀ ಮ ನಿ ಪ್ರ ಸ್ವ ಪ್ರಭು ನೀಲಕಂಠ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ದುರ್ಗಾಮಾತಾ ದೌಡ್ ಸಂಚಲನಕ್ಕೆ ಚಾಲನೆ ನೀಡಿದರು.ನಗರದ ಗ್ರಾಮ ದೇವಿ ದೇವಸ್ಥಾನ (ಜವಳಿ ಕೊಟ) ದಿಂದ ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ನಗರದ ಗಾಳಿ ದುರ್ಗಾದೇವಿ ದೇವಸ್ಥಾನಕ್ಕೆ ಮುಕ್ತಾಯವಾಯಿತು. ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖರು,ಕಾರ್ಯಕರ್ತರು, ನಗರದ ಪ್ರಮುಖರು, ಬಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು. ದೌಡ್ ಸಂಚರಿಸುವ ಮಾರ್ಗದಲ್ಲಿ ಮನೆಯ ಮುಂದೆ ರಂಗೋಲಿ, ತಳಿರು ತೋರಣಗಳಿಂದ ಸಿಂಗರಿಸಿ ತಮ್ಮ ಮನೆಯ ಬಾಗಿಲಿಗೆ ದೌಡ್ ಬಂದಾಗ ಭಗವಾಧ್ವಜ ಕ್ಕೆ ಮಾತೆಯರು ಆರತಿ ಬೆಳಗಿ ಪುಷ್ಪಾರ್ಚನೆ ಮಾಡಿದರು.