Join The Telegram | Join The WhatsApp |
ಸವದತ್ತಿ: ತಾಲೂಕಿನ ಕರೀಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕಿರುಗಾಲುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿರುವ ನರೇಗಾ ದಿನಾಚರಣೆ ಕಾರ್ಯಕ್ರಮವನ್ನು ಮಾನ್ಯ ತಾಪಂ ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶ್ರೀ ಆರ್ ಬಿ ರಕ್ಕಸಗಿ ರವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ(ಗ್ರಾ.ಉ) ಆರ್ ಬಿ ರಕ್ಕಸಗಿ ಮಾತನಾಡಿ ದುಡಿಯಲು ಬೇರೆ ಊರುಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ನೀಡಲಾಗುತ್ತಿದೆ ಒಂದು ಕುಟುಂಬಕ್ಕೆ ಒಂದು ಉದ್ಯೋಗ ಚೀಟಿಯನ್ನು ನೀಡಿ ಪ್ರತಿ ಒಂದು ಉದ್ಯೋಗ ಚೀಟಿಗೆ ವರ್ಷಕ್ಕೆ 100 ದಿನ ಕೆಲಸವನ್ನು ನೀಡಲಾಗುತ್ತಿದೆ. ಹಾಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೆಲಸ ನೀಡಿ ಸಮಾನ ಕೂಲಿಯನ್ನು ನೀಡಲಾಗುತ್ತಿದೆ. ಒಂದು ದಿನಕ್ಕೆ 309ರೂ. ಕೂಲಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.
ಕೃಷಿಹೊಂಡ, ದನದ ಶೆಡ್, ಕುರಿ. ಮೆಕ್ಕೆ ಸಾಕಾಣಿಕೆಗಾಗಿ ಶೆಡ್ ಗಳ ನಿರ್ಮಾಣ ಸೇರಿದಂತೆ ಹಲವು ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ. ಹಾಗಾಗಿ ಎಲ್ಲರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಕೂಲಿಕಾರರಿಗೆ ಮಾಹಿತಿಯನ್ನು ನೀಡಲಾಯಿತು. ಇದೇ ವೇಳೆ ಕೂಲಿಕಾರರಿಗೆ ಸಾಂಕೇತಿಕವಾಗಿ ಉದ್ಯೋಗ ಚೀಟಿಯನ್ನು ವಿತರಣೆ ಮಾಡಲಾಯಿತು. ಮತ್ತು ಕೂಲಿಕಾರರಿಗೆ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಿ.ಜಿ.ಗುರುನಗೌಡ್ರ, ತಾಪಂ ಐಇಸಿ ಸಂಯೋಜಕರಾದ ಮಲೀಕಜಾನ ಮೋಮಿನ, ಗ್ರಾಪಂ ಅಧ್ಯಕ್ಷರಾದ ಗುರುಶಿದ್ದಪ್ಪ ಗದಿಗೆಪ್ಪ ಕಿಲ್ಲೇದ, ಗ್ರಾಪಂ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಮಡಿವಾಳಪ್ಪ ಕಾಳಿ, ಗ್ರಾಪಂ ಸದಸ್ಯರುಗಳಾದ ಮಹಾರಾಜ ಕಾಡನ್ನವರ, ಪುಂಡಲೀಕ, ವಿಜಯಲಕ್ಷ್ಮೀ, ಬಿಎಫ್ ಟಿ ಬಸವರಾಜ, ಕಾಯಕ ಬಂಧುಗಳು, ಕೂಲಿಕಾರರು ಉಪಸ್ಥಿತರಿದ್ದರು.
Join The Telegram | Join The WhatsApp |