ಮುದಗಲ್ಲ
ಬಾಗಲಕೋಟೆಯ ನವನಗರದಲ್ಲಿರುವ ಭೋವಿ ಗುರುಪೀಠದಲ್ಲಿ ನ.23ರಂದು ಗುರು ಕುಟೀರ ಉದ್ಘಾಟನೆ ಹಾಗೂ ಶರಣ ಬಸವ ಸ್ವಾಮೀಜಿಯ ಗದ್ದುಗೆ ಮಂಟಪದ ಶಿಲನ್ಯಾಸ ಕಾರ್ಯಕ್ರಮದ ಅಂಗವಾಗಿ ಡಿಜಿಟಲ್ ರಥಯಾತ್ರೆಯು ಐತಿಹಾಸಿಕ ಮುದಗಲ್ಲ ಪಟ್ಟಣಕ್ಕೆ ಬುಧವಾರ ಆಗಮಿಸಿದ್ದು, ಪಟ್ಟಣದ ಪುರಸಭೆ ಮುಂದೆ ರಥಕ್ಕೆ ಪೂಜೆ ನೆರವೇರಿಸಿ ರಥಯಾತ್ರೆಗೆ ಚಾಲನೆ ನೀಡಲಾಯಿತು.
ರಥಯಾತ್ರೆಯು ಮುದಗಲ್ಲ ನ ಪ್ರಮುಖ ಬೀದಿಗಳಲ್ಲಿ ಮೆರವಣಿಯು ಸಂಚರಿಸಿ, ಸೇರಿದಂತೆ ಮುದಗಲ್ಲ ವಿವಿಧ ಗ್ರಾಮ ಗಳಿಗೆ ತೆರಳಿತು.
ಈ ಸಂದರ್ಭದಲ್ಲಿಭೋವಿ ಸಮಾಜದ ಮಾಜಿ ತಾಲೂಕು ಶರಣಪ್ಪ ,ಪ್ರಧಾನ ಕಾರ್ಯದರ್ಶಿ ಸತ್ಯಪ್ಪ ನೀರಾವರಿ,ಸತೀಶ್ ಭೋವಿ,ವಿರೇಶ ನೀರಾವರಿ ,ರಾಮಣ್ಣ ಭೋವಿ,ಮಹಾಂತೇಶ ಭೋವಿ,ರಾಜಪ್ಪ ಭೋವಿ,ಯಲ್ಲಪ್ಪ ಯರದಿಹಾಳ ಇತರರು ಉಪಸ್ಥಿತರಿದ್ದರು..
ಮಂಜುನಾಥ ಕುಂಬಾರ