Join The Telegram | Join The WhatsApp |
ಹುಬ್ಬಳ್ಳಿ : ಕಳೆದ ೧೫ ದಿನಗಳ ಹಿಂದೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದ ಬೆನ್ನಲ್ಲೇ, ಇದೀಗ ಕುಡುಕ ಪತಿಯೋರ್ವ ಕುಡಿದ ಮತ್ತಿನಲ್ಲಿಯೇ ಹೆಂಡತಿ ಹಾಗೂ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ತಾನು ನೇಣಿಗೆ ಶರಣಾದ ಘಟನೆ ಇಂದು ಬೆಳಂಬೆಳ್ಳಿಗ್ಗೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ.
ಸುಳ್ಳ ಗ್ರಾಮದ ಪಕ್ಕೀರಪ್ಪ ಮಾದರ ಎಂಬಾತ ಇಂದು ಬೆಳಗಿನ ನಾಲ್ಕು ಗಂಟೆಯ ಸುಮಾರಿಗೆ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಇಟ್ಟು ಮಾರಕಾಸ್ತ್ರದಿಂದ ಹೆಂಡತಿಯಾದ ಮುದಕವ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಮುದಕವ್ವ ಜೋರಾಗಿ ಕಿರುಚಿದಾಗ ಮನೆಯಲ್ಲಿ ಮಲಗಿದ್ದ ಮೂರು ಮಕ್ಕಳು ಎದ್ದು ಅಳಲು ಶುರು ಮಾಡಿದೆ.
ಇದರಿಂದ ಅಂತಕಕ್ಕೇ ಇಡಾದ ಪಕ್ಕೀರಪ್ಪ ಮೂರು ಮಕ್ಕಳಾದ
ಶ್ರಾವಣಿ (8) ಶ್ರೇಯಸ್(6) ಸೃಷ್ಟಿ (4)ಎಂಬ ಮಕ್ಕಳ ಮೇಲೆ ಹಲ್ಲೆ ಮಾಡಿದ್ದು, ಮೂರು ಮಕ್ಕಳು ಸ್ಥಿತಿ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿವೆ.ಇತ್ತ ಮಕ್ಕಳು ಹಾಗೂ ಹೆಂಡತಿ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿಳುತ್ತಿದ್ದ ಹಾಗೆ ಪಕ್ಕೀರಪ್ಪ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯ ಅಕ್ಕಪಕ್ಕದವರು ಟಿವಿ ಸೌಂಡ್ ಕೇಳಿ ಬಾಗಿಲು ಬಡೆದಾಗ ಯಾರು ಬಾಗಿಯಲು ತೆರೆಯದ ಹಿನ್ನೆಲೆ ಬಾಗಿಲು ಮುರಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂರು ಮಕ್ಕಳು ಹಾಗೂ ಮುದಕವ್ವನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದು ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಧೀರ್ ಕುಲಕರ್ಣಿ
Join The Telegram | Join The WhatsApp |